ಅಫ್ಘಾನಿಸ್ತಾನದ ನಂಗರ್ ಹಾರ್ ಮೇಲೆ ಅಮೆರಿಕದ ನಾನ್ ನ್ಯೂಕ್ಲಿಯರ್ ಬಾಂಬ್ ದಾಳಿ

ವಾಷಿಂಗ್ಟನ್, ಎ.13: ಅಫ್ಗಾನಿಸ್ತಾನದ ನಂಗರ್‌ಹಾರ್ ಪ್ರಾಂತದ ಮೇಲೆ ಅಮೆರಿಕ ವಾಯುಪಡೆ ಅತಿ ದೊಡ್ಡ ನಾನ್ ನ್ಯೂಕ್ಲಿಯರ್ ಬಾಂಬ್ ನಡೆಸಿದ್ದು ಸಾವು ನೋವಿನ ಬಗ್ಗೆ ವರದಿಯಾಗಿಲ್ಲ.
ಐಸಿಸ್ ಉಗ್ರರ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಅಚಿನ್ ಜಿಲ್ಲೆಯ ನಂಗರ್‌ಹಾರ್ ಮೇಲೆ ಅಮೆರಿಕದ ವಾಯು ಪಡೆಯು 11,000 ಟನ್ ತೂಕದ ಜಿಬಿಯು -43, ಬಾಂಬ್ ದಾಳಿ ನಡೆಸಿದೆ. ಜಿಬಿಯು -43ಬಾಂಬ್‌ನ್ನು ಮೊದಲ ಬಾರಿ ಯುದ್ದದಲ್ಲಿ ಬಳಸಲಾಗಿದೆ.
ಐಸಿಸ್ ಸುರಂಗ ಮಾರ್ಗ ಹಾಗೂ ಉಗ್ರರ ಮೇಲೆ ಅತ್ಯಂತ ಅಪಾಯಕಾರಿ ."ಮದರ್ ಆಫ್ ಆಲ್ ಬಾಂಬ್" ಖ್ಯಾತಿಯ ಬಾಂಬ್ ದಾಳಿ ನಡೆಸುವ ಮೂಲಕ ಅಮೆರಿಕ ಉಗ್ರರ ವಿರುದ್ಧ ನಿರ್ಣಾಯಕ ಹೋರಾಟ ಆರಂಭಿಸಿದೆ.
Next Story





