ಕ್ಷುಲ್ಲಕ ಕಾರಣಕ್ಕಾಗಿ ಚೂರಿ ಇರಿತ: ಇಬ್ಬರ ಬಂಧನ
ಭಟ್ಕಳ, ಎ.13: ಕ್ಷುಲ್ಲಕ ಕಾರಣಕ್ಕಾಗಿ ತಾಯಿ ಹಾಗೂ ಮಗನಿಗೆ ಚೂರಿಯಿಂದ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಠಾಣೆಯ ಪೊಲೀಸರು ಗುರುವಾರ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ನಾರಾಯಣ ನಾಗಪ್ಪ ನಾಯ್ಕ ಹಾಗೂ ನಾಗೇಶ ನಾಗಪ್ಪ ನಾಯ್ಕ ಎಂದು ತಿಳಿದುಬಂದಿದೆ.
ಅಶೋಕ ನಾಯ್ಕ ಎಂಬವರು ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದು, ತನ್ನ ತಾಯಿ ಮಾದೇವಿ ಬಾವಿಯಿಂದ ನೀರು ತರಲು ಹೋದಾಗ ನಾಗೇಶ ನಾಗಪ್ಪ ನಾಯ್ಕ ಅವರನ್ನು ಅಡ್ಡಗಟ್ಟಿ ಹೊಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಚೂರಿಯಿಂದ ಇರಿದು ಗಾಯಗೊಳಿಸಿದ್ದಾಗಿ ತಿಳಿಸಿದ್ದಾರೆ. ನಾರಾಯಣ ನಾಗಪ್ಪ ನಾಯ್ಕ ಹಾಗೂ ನಾಗೇಶ ವೆಂಕಟೇಪ್ಪ ನಾಯ್ಕ ಎಂಬುವವರು ಇದಕ್ಕೆ ಸಹಕಾರ ನೀಡಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾರಾಯಣ ನಾಗಪ್ಪ ನಾಯ್ಕ ಹಾಗೂ ನಾಗೇಶ ನಾಗಪ್ಪ ನಾಯ್ಕರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
Next Story





