Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ‘‘ಕೊರಳಿನ ಅಂಬೇಡ್ಕರ್ ಬೇಡ ಕರುಳಿನ...

‘‘ಕೊರಳಿನ ಅಂಬೇಡ್ಕರ್ ಬೇಡ ಕರುಳಿನ ಅಂಬೇಡ್ಕರ್ ಬೇಕು’’

ಮಲ್ಕುಂಡಿ ಮಹದೇವಸ್ವಾಮಿಮಲ್ಕುಂಡಿ ಮಹದೇವಸ್ವಾಮಿ14 April 2017 12:24 AM IST
share
‘‘ಕೊರಳಿನ ಅಂಬೇಡ್ಕರ್ ಬೇಡ ಕರುಳಿನ ಅಂಬೇಡ್ಕರ್ ಬೇಕು’’

ಇಂದು ಶೋಷಿತ ಸಮುದಾಯಗಳು ಸಂಪೂರ್ಣ ಸುಖ, ಸಂಪತ್ತುಗಳಿಂದ ತುಂಬಿರದಿರಬಹುದು. ಆದರೆ ಅವರಲ್ಲಿ ಸ್ವಾಭಿಮಾನ ಜಾಗೃತಗೊಂಡಿದೆ. ಅನ್ಯಾಯದ ವಿರುದ್ಧ ಹೋರಾಡುವ ಧೈರ್ಯ ಬಂದಿದೆ. ರಾಜಕೀಯ ಹಕ್ಕು, ಜಾಗೃತಿ ವಿಸ್ತರಿಸಿಕೊಂಡಿರುವ ಈ ಸಂದರ್ಭದಲ್ಲಿ ಹಾಡಿ ಹೊಗಳಿ ಕೊರಳಿನಿಂದೀಚೆಗೆ ಅಂಬೇಡ್ಕರರನ್ನು ಹೊಗಳುವ ನಾಯಕರಿಗಿಂತ ಕರುಳಿನಿಂದ ಉಸಿರಾಡುವ ನಾಯಕರು ಹುಟ್ಟಬೇಕಿದೆ.


ಮೊನ್ನೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂಬೇಡ್ಕರ್‌ರವರ ಭಾವಚಿತ್ರವನ್ನು ಬಿಡುಗಡೆಗೊಳಿಸಿ, Dr. B.R. Ambedkar is the greatest personality in the world I salut them ಎಂದು ಹೇಳಿ ಕೊಲಂಬಿಯಾ ಯೂನಿವರ್ಸಿಟಿಯ ಹೆಬ್ಬಾಗಿಲಲ್ಲಿ ಅಂಬೇಡ್ಕರ್‌ರವರ ಭಾವಚಿತ್ರದ ಕೆಳಗೆ ಬರೆದಿರುವ ‘‘ಸಿಂಬಲ್ ಆಫ್ ನಾಲೆಜ್’’ ಎಂಬ ಪದವನ್ನು ಮೂರು ಬಾರಿ ಉಚ್ಛರಿಸಿ, ‘‘ನಮಗೆ ಗರ್ವವಿದೆ ಇಂತಹ ವ್ಯಕ್ತಿಯು ನಮ್ಮ ದೇಶದ ಯೂನಿವರ್ಸಿಟಿಯಲ್ಲಿ ಅಭ್ಯಸಿಸಿ ಹೋಗಿದ್ದಾರೆ ಮತ್ತು ಇವರು ಭಾರತ ದೇಶದ ಸಂವಿಧಾನವನ್ನು ಬರೆದು ಆ ದೇಶಕ್ಕೆ ಮಹಾ ಉಪಕಾರ ಮಾಡಿದ್ದಾರೆ’’ ಎಂದು ಕಲ್ಲಿನಲ್ಲಿ ಕೆತ್ತಿಸಿರುವ ಸಾಲುಗಳನ್ನು ಎಲ್ಲರೂ ಉದ್ಘರಿಸುತ್ತ ಗೌರವಿಸಿ ಇಡೀ ಕೊಲಂಬಿಯ ಯೂನಿವರ್ಸಿಟಿಯೇ ಹೆಮ್ಮೆ ಪಟ್ಟಿತು.

ಇಂತಹ ಸಂದರ್ಭದಲ್ಲಿ ಇದೇ ಯೂನಿವರ್ಸಿಟಿಯ ಮತ್ತೊಂದು ಹೆಮ್ಮೆಯ ಪ್ರಸಂಗವನ್ನು ವಿವರಿಸಬೇಕೆಂದೆನಿಸುತ್ತದೆ. ಈ ಯೂನಿವರ್ಸಿಟಿಯ ಗ್ರಂಥಾಲಯದೊಳಗಡೆ ತನ್ನ 300 ವರ್ಷಗಳ ಇತಿಹಾಸದಲ್ಲಿ ಎರಡು ಕುರ್ಚಿಗಳನ್ನು ಬಹಳ ಸುರಕ್ಷಿತವಾಗಿ ಗಾಜಿನ ಗ್ಯಾಲರಿಯೊಳಗೆ ಸಂರಕ್ಷಿಸಿಡಲಾಗಿದೆ. ಆ ಎರಡು ಕುರ್ಚಿಗಳು ಜಗತ್ತಿನ ಇಬ್ಬರು ಮಹಾನ್ ವ್ಯಕ್ತಿಗಳು ತಮ್ಮ ವಿದ್ಯಾರ್ಥಿ ಬದುಕಿನಲ್ಲಿ ಆ ಗ್ರಂಥಾಲಯದೊಳಗೆ ಕುಳಿತು ಓದುತ್ತಿದ್ದ ಕುರ್ಚಿಗಳಾಗಿದ್ದವು. ಅಂತಹ ಮಹೋನ್ನತ ವಿದ್ಯಾರ್ಥಿಗಳೆಂದರೆ ಒಬ್ಬರು ಕಾರ್ಲ್‌ಮಾರ್ಕ್ಸ್, ಮತ್ತೊಬ್ಬರು ಡಾ. ಬಿ.ಆರ್. ಅಂಬೇಡ್ಕರ್‌ರವರು. ಈ ಕುರ್ಚಿಗಳನ್ನು ಇನ್ನು ಕೂಡ ಬಹಳ ಗೌರವಪೂರ್ವಕವಾಗಿ ಇಡಲಾಗಿದೆ. ಇದು ಯಾರ ಹೆಮ್ಮೆ?

ಹಾಗೆ 2010 ನವೆಂಬರ್ 8 ಬರಾಕ್ ಒಬಾಮ ಮಾತನಾಡುತ್ತ ‘‘ಭಾರತ ಇನ್ನೂ ಸಾವಿರ ವರ್ಷಗಳು ಸುಭದ್ರವಾಗಿರುತ್ತದೆ. ಏಕೆಂದರೆ ಡಾ. ಅಂಬೇಡ್ಕರ್ ಅಷ್ಟು ಭದ್ರವಾದ ಸಂವಿಧಾನವನ್ನು ಈ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ’’ ಎಂದಾಗ, ಇಡೀ ಸಭಾಂಗಣ ಚಪ್ಪಾಳೆಯ ಮಳೆಗೆರೆಯಿತು. ಆದರೆ ಅಂಬೇಡ್ಕರರ ವಿಚಾರದಲ್ಲಿ ಒಬಾಮ ಇಳಿದಷ್ಟು ಆಳಕ್ಕೆ ನಮ್ಮವರೆಂದೆನಿಸಿಕೊಂಡವರು ಇಳಿದಿಲ್ಲವೇಕೆ ಎಂದೆನಿಸಿತು ಮತ್ತು ಒಬಾಮರ ಅಂದಿನ ಮಾತುಗಳು ಅವರ ಕೊರಳಿನಿಂದ ಬಂದವಷ್ಟೆಯಾಗಿರದೆ ಕರುಳಿನಿಂದ ಬಂದಂತಹುದು ಎಂದೆನಿಸಿತು. ಇದಕ್ಕೆ ಪೂರಕವಾಗಿಯೇ ಒಬಾಮರವರು ವಿಶ್ವಸಂಸ್ಥೆಯ ಅಂಬೇಡ್ಕರರ 125ನೆ ದಿನಾಚರಣೆಯಲ್ಲಿ ಎ.14ನ್ನು ‘ವಿಶ್ವಜ್ಞಾನ ದಿನವನ್ನಾಗಿ’ ಆಚರಿಸ ಹೊರಟಾಗ ಬಹುಮುಖ್ಯ ಪಾತ್ರವನ್ನು ವಹಿಸಿದರು.

ಅಂಬೇಡ್ಕರರ ಜ್ಞಾನ, ವಿದೇಶಿಯರ ಆಳಕ್ಕೆ ಇಳಿದಷ್ಟು ಭಾರತೀಯರಿಗೆ ಇನ್ನೂ ಇಳಿದಿಲ್ಲವೆಂದೆನಿಸುತ್ತದೆ. ಅಂಬೇಡ್ಕರರ ಗ್ರಹಿಕೆಯು, ಒಂದು ವರ್ಗಕ್ಕೆ ಪ್ರತ್ಯೇಕವಾಗಿ ಮೀಸಲಿಟ್ಟಂತೆ ಕಂಡು ಬಂದು ತನ್ನ ಸಮಗ್ರತೆಯ ಪರಿಕಲ್ಪನೆಯಿಂದಾಚೆಗೆ ಚಲಿಸುವಂತಾಗಿದೆ. ಇಂದಿನವರ ಬರಹಗಳು, ಭಾಷಣಗಳು, ಹೋರಾಟಗಳು ಅಂಬೇಡ್ಕರರನ್ನೇ ಕೇಂದ್ರಬಿಂದುವನ್ನಾಗಿಟ್ಟುಕೊಂಡರೂ ಅವರ ನೈಜ ಚಿಂತನೆಗಳಿಂದ ದೂರ ನಿಂತಿವೆ.

ಅಂಬೇಡ್ಕರರು ಶೋಷಿತ ಸಮುದಾಯದ ಹೋರಾಟಕ್ಕೆ ಬಹುದೊಡ್ಡ ‘ಐಕಾನ್’ ಆಗಿ ಹೊರಹೊಮ್ಮಿದರು. ಸ್ವಾಭಿಮಾನದ ಸಂಕೇತವಾದರು. ಅವರ ವಿದ್ವತ್ತು, ಅವರ ತತ್ವಜ್ಞಾನ, ಸಾಮಾಜಿಕ, ಆರ್ಥಿಕ ಬದಲಾವಣೆ ಚಿಂತನೆ, ‘ಪೊಲಿಟಿಕಲ್ ಐಡಿಯಾಲಜಿ’ ಸಂವಿಧಾನ ರಚನೆಯಲ್ಲಿ ಅವರ ಶ್ರಮವನ್ನಷ್ಟೆ ಈ 75 ವರ್ಷಗಳಲ್ಲಿ ಸಮಾಜದೊಳಗೆ ಬಿಂಬಿಸಲಾಯಿತೆ ಹೊರತು ಅವರ ‘ಬದುಕಿನ ತತ್ವಜ್ಞಾನವನ್ನಲ್ಲ’ ಅವರ ಬದುಕಿನ ತ್ಯಾಗವನ್ನಲ್ಲ. ಅಂಬೇಡ್ಕರರ ಬದುಕು ಒಂದು ‘ಬಹುದೊಡ್ಡ ತ್ಯಾಗ’ವೆಂದು ನಮ್ಮ ಅರಿವಿಗೆ ಬಾರದಿದ್ದಲ್ಲಿ ಅಂಬೇಡ್ಕರರನ್ನು ಗ್ರಹಿಸುವುದು ಅಸಾಧ್ಯ. ಭಾರತವನ್ನು ಭಾರತವಾಗಿಸಲು ಅಂಬೇಡ್ಕರರು ಮಾಡಿದ ತ್ಯಾಗವನ್ನು ಗ್ರಹಿಸಿದವರಲ್ಲಿ ಮಾತ್ರ ಅಂಬೇಡ್ಕರರು ಕರುಳಿನಿಂದ ಜನಿಸುತ್ತಾರೆ. ಯಾಕೆಂದರೆ ಅಂಬೇಡ್ಕರರಿಗೂ ಈ ದೇಶದ ಶೋಷಿತ ಸಮುದಾಯಗಳಿಗೂ ಮಾತೃಹೃದಯಿ ಸಂಬಂಧವಿದೆ. ಇದಕ್ಕೆ ಎರಡು ನಿದರ್ಶನಗಳನ್ನು ನಾನಿಲ್ಲಿ ಹೇಳಬೇಕಿದೆ.

ನಿದರ್ಶನ-1
ಒಮ್ಮೆ ಕಾರಿನಲ್ಲಿ ಸತಾರಕ್ಕೆ ತೆರಳುತ್ತಿದ್ದ ಅಂಬೇಡ್ಕರರು ನಾಲ್ಕೈದು ಮಕ್ಕಳು ಮೈಮೇಲೆ ಬಟ್ಟೆಯಿಲ್ಲದೆ ಉರಿಬಿಸಿಲಿನಲ್ಲಿ ಮಣ್ಣಿನಲ್ಲಿ ಆಟವಾಡುವುದನ್ನು ನೋಡಿ, ಡ್ರೈವರ್‌ಗೆ ಕಾರು ನಿಲ್ಲಿಸಲು ಹೇಳಿದರು. ಮಕ್ಕಳ ಬಳಿಗೆ ಹೋಗಿ ಆ ಮಕ್ಕಳನ್ನು ತನ್ನ ಬಾಹುಗಳಿಂದ ಬಾಚಿ ತಬ್ಬಿ ‘‘ಮಕ್ಕಳೆ ನಾನು ಈ ದೇಶದಲ್ಲಿ ಎಂತೆಂತವರಿಗೆಲ್ಲ ಏನೆಲ್ಲಾ ಮಾಡಿದೆ. ಶಿಕ್ಷಣ, ಅಧಿಕಾರ, ಆಸ್ತಿ ಹಕ್ಕುಗಳನ್ನೆಲ್ಲ ಕೊಡಿಸಿದೆ. ಆದರೆ ನಿಮಗೆ ತೊಡುವುದಕ್ಕೆ ಬಟ್ಟೆಯನ್ನು ಕೊಡಿಸಲಾಗಲಿಲ್ಲವಲ್ಲ. ನನ್ನ ಕ್ಷಮಿಸುತ್ತೀರಾ?’’ ಎಂದು ಭಾವುಕರಾಗಿ ಕಣ್ಣೀರಿಟ್ಟರು. ಇಂದಿಗೂ ಕೂಡ ನಾವು ರಸ್ತೆ ಬದಿಗಳಲ್ಲಿ, ಕುಗ್ರಾಮಗಳಲ್ಲಿ, ಅಸ್ಪಶ್ಯ ಕೇರಿಗಳಲ್ಲಿ, ಅಂತಹ ಮಕ್ಕಳು ನಮ್ಮ ಕಣ್ಮುಂದೆ ಬಂದಾಗ ಅಂಬೇಡ್ಕರರಿಗೆ ಅನಿಸಿದಂತೆ ನಮಗೆ ಅನಿಸುವುದಿಲ್ಲ. ಯಾಕೆಂದರೆ ಅವರಂತೆ ನಮಗೆ ಸಮಾಜದೊಂದಿಗಿನ ಬಾಂಧವ್ಯ ಇಲ್ಲ. ಇಲ್ಲಿ ನಮ್ಮಾಳಗಿರುವುದು ಹಾಡಿ ಹೊಗಳುವ ಕೊರಳಿನ ಅಂಬೇಡ್ಕರ್ ಹೊರತು, ನೋವನ್ನು ನೀಗುವ ಕರುಳಿನ ಅಂಬೇಡ್ಕರ್ ಅಲ್ಲ.

ನಿದರ್ಶನ-2
ಮುಂಬೈ ಪ್ರಾಂತದಲ್ಲಿ ವಕೀಲ ವೃತ್ತಿಯಲ್ಲಿದ್ದಾಗ ದಲಿತ ಸಮುದಾಯದ ಮೊಕದ್ದಮೆಯೊಂದಕ್ಕೆ ಮಹಜರ್ ಹೇಳಿಕೆಗೆ ದಾವಿಸಿದ ಅಂಬೇಡ್ಕರ್ ಅವರು, ದಲಿತರ ಗುಡಿಸಿಲಿನ ಬಳಿ ಬಂದು ಹೊರಗೆ ಕೂರುತ್ತಾರೆ. ಅಲ್ಲಿ ಅತ್ತೆ ಮತ್ತು ಸೊಸೆಯರ ಸಹಿ ಮತ್ತು ಹೇಳಿಕೆ ಬೇಕಿರುತ್ತದೆ. ಮೊದಲು ಅತ್ತೆ ಬಂದು ಹೇಳಿಕೆ ಮತ್ತು ಸಹಿ ಮಾಡಿ ಹೊರಟು ಅರ್ಧತಾಸಿನ ನಂತರ ಸೊಸೆ ಬರುತ್ತಾಳೆ. ಆಕೆಯು ಸಹಿ ಮತ್ತು ಹೇಳಿಕೆ ನೀಡುವಾಗ ಅಂಬೇಡ್ಕರರು ಇಬ್ಬರು ಒಮ್ಮೆಗೆ ಬಂದು ಹೇಳಿಕೆ ನೀಡಿ ಎಂದು ವಿನಂತಿಸಲು ಅತ್ತೆ ಉತ್ತರಿಸುತ್ತ ಸ್ವಾಮಿ ನಾವಿಬ್ಬರು ಏಕಕಾಲದಲ್ಲಿ ನಿಮ್ಮ ಮುಂದೆ ಬಂದು ಹೇಳಿಕೆ ನೀಡಲು ಅಸಾಧ್ಯ. ಏಕೆಂದರೆ ನಮ್ಮಲ್ಲಿ ಇರುವುದು ಒಂದೇ ಸೀರೆ ಅದನ್ನೆ ನಾವಿಬ್ಬರು ಒಬ್ಬರಾದ ಮೇಲೆ ಒಬ್ಬರಂತೆ ಉಟ್ಟು ಬರಬೇಕಿದೆ ಎಂದು ದುಃಖಿತರಾದರು. ವಿಚಲಿತಗೊಂಡ ಬಾಬಾ ಸಾಹೇಬರಿಗೆ ಈ ಘಟನೆ ಈ ನೆಲದಲ್ಲಿ ಮಹಿಳಾಪರ ಹೋರಾಟಕ್ಕೆ ಇಳಿಯಲು ಪೂರಕವಾಯಿತು. ಇಂದಿನ ಮಹಿಳೆ ಈ ಮಟ್ಟಕ್ಕೆ ಅರಳಿ ನಿಲ್ಲಲು ಸಾಧ್ಯವಾಯಿತು. ಯಾರನ್ನು ಅವರು ಸಂಪೂರ್ಣವಾಗಿ ಮುಟ್ಟಬೇಕೆಂದುಕೊಂಡಿದ್ದರೂ ಅವರನ್ನು ತನ್ನ ಅನುಯಾಯಿಗಳ ಮುಖಾಂತರ ಮುಟ್ಟಬೇಕೆಂದುಕೊಂಡಿದ್ದರು. ಆದರೆ ಇಂದಿನ ಹೋರಾಟಗಳು ಮಾರಾಟಕ್ಕಿದ್ದಂತೆ ಕಾಣುತ್ತಿದೆ. ಅನ್ನದ ದಾಹಕ್ಕಿಂತ, ಅಧಿಕಾರದ ದಾಹ ಎಲ್ಲೆ ಮೀರಿ ನಿಂತಿದೆ. ದಲಿತ ನಾಯಕನೊಬ್ಬನ ಮಾರಣ ಹೋಮಕ್ಕೆ ಮತ್ತೊಬ್ಬ ದಲಿತ ಸಜ್ಜಾಗಿ ನಿಂತಿದ್ದಾನೆ. ಅರಿವು ಅಹಂಕಾರದ ರೂಪ ತಾಳಿ ಬುದ್ಧ, ಬಸವಣ್ಣರನ್ನು ಪ್ರಶ್ನಿಸಿದಂತೆ ಮಾಡಿದೆ. ಬಲಿತ ದಲಿತನೊಬ್ಬ ಅಂಬೇಡ್ಕರರನ್ನು ತನ್ನ ಬದುಕಿನ ಆಸ್ತಿಯನ್ನಾಗಿಸಿಕೊಂಡಿದ್ದಾನೆ.

ತುತ್ತು ಅನ್ನಕ್ಕಾಗಿ ಜೀತ ಮಾಡುವಾಗ ಜೀತವೇ ಬದುಕು. ಅನ್ನಕ್ಕಾಗಿ ಕೂಲಿ ಮಾಡುವಾಗ ಕೂಲಿಯೇ ಬದುಕು. ಇಂದು ಅನ್ನಕ್ಕಾಗಿ ಅಕ್ಷರವೇ ಬದುಕಾಗಿದೆ. ಅಕ್ಷರ ಕೇವಲ ಇಷ್ಟಕ್ಕೆ ಎಂದು ಭಾವಿಸಿದರೆ ಮತ್ತೊಮ್ಮೆ ಇಲ್ಲಿ ಜೀತದ ಕ್ರೌರ್ಯದಲ್ಲೂ, ಕೂಲಿಯ ನರಕದಲ್ಲೂ ಒದ್ದಾಡಬೇಕಿದೆ ಎಂಬ ಅರಿವು ಮಾಯವಾದಂತೆ ಕಾಣುತ್ತಿದೆ.

ಇನ್ನೂ ಹಳ್ಳಿಗಳು ಜಾತಿಯ ಕ್ರೌರ್ಯದಲ್ಲಿ ಕುದಿಯುತ್ತಿವೆ. ನಗರಗಳು ಜಾಗತಿಕ ತಾಪದಲ್ಲಿ ನರಳುತ್ತಿವೆ. ಸ್ತ್ರೀ ಶೋಷಣೆ ಇಲ್ಲಿ ತಾಂಡವವಾಡುತ್ತಿದೆ ಬುದ್ಧ, ಬಸವ, ಅಂಬೇಡ್ಕರರು ಕೇವಲ ಆರಾಧನೆಗೆ ಸೀಮಿತಗೊಳ್ಳುತ್ತಿದ್ದಾರೆ. ಆಚರಣೆಗಿಂತ ಅನುಸರಣೆ ನಮ್ಮ ಧ್ಯೇಯವಾಗಬೇಕು. ಇಲ್ಲದಿದ್ದರೆ ಇಲ್ಲಿ ಬದುಕುಳಿಯುವುದು ಕಷ್ಟ. ಮಾನವ ಪ್ರೇಮಕ್ಕೆ ಅವಕಾಶವಿಲ್ಲದಿದ್ದ ಕಾಲದಲ್ಲಿ ಬುದ್ಧ ಈ ನೆಲದಲ್ಲಿ ಕರುಣೆಯನ್ನು ಬಿತ್ತಿದ. ಬಸವಣ್ಣ ದಯೆಯನ್ನು ಬಿತ್ತಿದ. ಪಾರ್ಲಿಮೆಂಟಿನೊಳಗೆ ಕಸಗುಡಿಸುವ ಕೆಲಸಕ್ಕೂ ದಲಿತರಿಗೆ ಪ್ರವೇಶವಿಲ್ಲದ ಕಾಲದಲ್ಲಿ ಅಂಬೇಡ್ಕರರು ಮಂತ್ರಿಗಳನ್ನು ಸೃಷ್ಟಿ ಮಾಡಿದರು. ಅಸ್ಪಶ್ಯರಿಗೆ ಶಾಲೆಯ ಬಾಗಿಲುಗಳು ಮುಚ್ಚಿದಾಗ ಹತ್ತಾರು ಶಾಲಾ ಬೋರ್ಡಿಂಗ್‌ಗಳು ತೆರೆದುಕೊಂಡವು.

ಇಂದು ಶೋಷಿತ ಸಮುದಾಯಗಳು ಸಂಪೂರ್ಣ ಸುಖ, ಸಂಪತ್ತುಗಳಿಂದ ತುಂಬಿರದಿರಬಹುದು. ಆದರೆ ಅವರಲ್ಲಿ ಸ್ವಾಭಿಮಾನ ಜಾಗೃತಗೊಂಡಿದೆ. ಅನ್ಯಾಯದ ವಿರುದ್ಧ ಹೋರಾಡುವ ಧೈರ್ಯ ಬಂದಿದೆ. ರಾಜಕೀಯ ಹಕ್ಕು, ಜಾಗೃತಿ ವಿಸ್ತರಿಸಿಕೊಂಡಿರುವ ಈ ಸಂದರ್ಭದಲ್ಲಿ ಹಾಡಿ ಹೊಗಳಿ ಕೊರಳಿನಿಂದೀಚೆಗೆ ಅಂಬೇಡ್ಕರರನ್ನು ಹೊಗಳುವ ನಾಯಕರಿಗಿಂತ ಕರುಳಿನಿಂದ ಉಸಿರಾಡುವ ನಾಯಕರು ಹುಟ್ಟಬೇಕಿದೆ.

share
ಮಲ್ಕುಂಡಿ ಮಹದೇವಸ್ವಾಮಿ
ಮಲ್ಕುಂಡಿ ಮಹದೇವಸ್ವಾಮಿ
Next Story
X