ಅಮೆರಿಕದ ಸೇನಾಪಡೆಯ ಬಾಂಬ್ ದಾಳಿಗೆ 36 ಉಗ್ರರು ಬಲಿ

ಕಾಬೂಲ್, ಎ.14: ಅಮೆರಿಕದ ಸೇನಾ ಪಡೆ ಆಫ್ಘಾನಿಸ್ತಾನದ ನಂಗರ್‌ಹಾರ್ ಮೇಲೆ ಗುರುವಾರ ನಡೆಸಿದ ಬಾಂಬ್ ದಾಳಿಯಲ್ಲಿ 36 ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರು ಮೃತಪಟ್ಟಿದ್ದಾರೆ.
ಬಾಂಬ್ ದಾಳಿಯಲ್ಲಿ ಉಗ್ರರ ಅಡಗು ತಾಣವನ್ನು ಧ್ವಂಸ ಮಾಡಲಾಗಿದೆಎಂದು ಅಧಿಕೃತ ಮೂಲಗಳು ತಿಳಿಸಿವೆ.
ಉಗ್ರರ ಅಡಗುತಾಣಗಳನ್ನು ಗುರಿಯಾಗಿರಿಸಿ ಮ್ಯಾಸಿವ್ ಆರ್ಡಿನೆನ್ಸ್ ಏರ್ ಬ್ಲ್ಯಾಸ್ಟ್–ಎಂಒಎಬಿ’ ಎಂದು ಕರೆಯಲಾಗುವ 10.3 ಟನ್ ತೂಕದ ಭಾರೀ ಗಾತ್ರದ ಬಾಂಬ್ ನ್ನು ಅಮೆರಿಕದ ಸೇನಾ ಪಡೆ ಹಾಕಿರುವ ಪರಿಣಾಮವಾಗಿ ಮೃತಪಟ್ಟಿರುವ ನಾಗರಿಕರ ವಿವರ ಲಭ್ಯವಿಲ್ಲ.
ನಂಗರ್‌ಹಾರ್‌ನಲ್ಲಿ ಇತ್ತೀಚೆಗೆ ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧದ ಹೋರಾಟದಲ್ಲಿ ಅಮೆರಿಕದ ‘ಗ್ರೀನ್ ಬೆರೆಟ್’ ಪಡೆಯ ಸೈನಿಕರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
Next Story





