ಏಷ್ಯನ್ ರಾಷ್ಟ್ರಗಳಲ್ಲಿ ತೈಲ ಬಳಕೆ ಇಳಿಮುಖ

ಸಿಂಗಾಪುರ, ಎ. 14: ಏಷ್ಯನ್ ರಾಷ್ಟ್ರಗಳಲ್ಲಿ ಇಂಧನ ತೈಲ ಬಳಕೆಯ ಪ್ರಮಾಣ ಕಡಿಮೆಯಾಗಿದೆ ಎಂದು ವರದಿಯಾಗಿದೆ. ಚೀನ,ಭಾರತ, ಜಪಾನ್, ದಕ್ಷಿಣಕೊರಿಯ ಮೊದಲಾದ ದೇಶಗಳಲ್ಲಿ ತೈಲಬಳಕೆಯಲ್ಲಿ ಗಣನೀಯ ಇಳಿಕೆಯಾಗಿದೆ.
ಚೀನದಲ್ಲಿ ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ತೈಲ ಬಳಕೆ ಇಳಿಮುಖಗೊಂಡಿದೆ. ಪ್ರಧಾನ ತೈಲ ಬಳಕೆದಾರ ಭಾರತದಲ್ಲಿ ಮಾರ್ಚ್‌ನಲ್ಲಿ ಕಳೆ ದ ಮೂರುವರ್ಷಗಳಿಗೆ ಹೋಲಿಸಿದರೆ ತೈಲ ಬಳಕೆ ಶೇ. 0.6 ಕಡಿಮೆಯಾಗಿದೆ. ನವೆಂಬರ್‌ನಲ್ಲಿ ಜಾರಿಗೆ ಬಂದಿದ್ದ ನೋಟು ಅಮಾನ್ಯೀಕರಣ ಇದಕ್ಕೆ ಕಾರಣವೆಂದು ತಿಳಿಸಲಾಗಿದೆ. ಈ ವರ್ಷ ಭಾರತದಲಿ ಶೇ. 6ರಷ್ಟು ತೈಲ ಬಳಕೆಯಲ್ಲಿ ಹೆಚ್ಚಳ ವಾಗಬಹುದು ಎಂದು ಹಿಂದೂಸ್ಥಾನ್ ಪ್ರೆಟ್ರೋಲಿಯಂನ ಅಧ್ಯಕ್ಷ ಎಂ.ಕೆ. ಸುರಾನ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಜಪಾನ್ ದಕ್ಷಿಣ ಕೊರಿಯಗಳಲ್ಲಿ ಜನಸಂಖ್ಯೆ ಪ್ರಮಾಣದಲ್ಲಿ ಇಳಿಕೆಯಿಂದ ತೈಲಬಳಕೆ ಕಡಿಮೆಯಾಗಿದೆ ಎನ್ನಲಾಗುತ್ತಿದೆ. 2065ಕ್ಕಾಗುವಾಗ ಜಪಾನ್‌ನ ಜನಸಂಖ್ಯೆಯ ಮೂರನೇ ಒಂದರಷ್ಟು ಕಡಿಮೆ ಆಗಲಿದೆ. ಹೀಗಾಗಿ ವರ್ಷದಲ್ಲಿ ಶೇ. 1.5ರಷ್ಟು ಇಂಧನ ಬಳಕೆ ಕಡಿಮೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ.
ದಕ್ಷಿಣಾಫ್ರಿಕದಲ್ಲಿ ಜನವರಿ-ಫೆಬ್ರವರಿ ನಡುವಿನ ಅವಧಿಯಲ್ಲಿ 0.4ರಷ್ಟು ತೈಲ ಉಪಯೋಗ ಕಡಿಮೆ ಯಾಗಿದೆ. ತಂತ್ರಜ್ಞಾನ ಅಭಿವೃದ್ಧಿಯಿಂದ ಇಂಧನಕ್ಕೆ ಬದಲಿ ಮೂಲಗಳನ್ನು ಉಪಯೋಗಿಸಿದ್ದರಿಂದ ತೈಲವನ್ನು ಉಪಯೋಗಿಸುವುದು ಕಡಿಮೆಯಾಗಿದೆ.
ಜಗತ್ತಿನಲ್ಲಿ ಅತ್ಯಧಿಕ ತೈಲ ಬಳಸುತ್ತಿರುವುದು ಏಷ್ಯನ್ ದೇಶಗಳು. ಸಿರಿಯದಲ್ಲಿ ಅಮೆರಿಕದ ಮಿಸೈಲ್ ದಾಳಿಯಿಂದಾಗಿ ಈ ತಿಂಗಳು ಬ್ರೆಂಟ್ ಕ್ರೂಡ್ ಆಯಿಲ್‌ಗೆ ಶೇ.5.5ರಷ್ಟು ಹೆಚ್ಳಳವಾಗಿ, ಬ್ಯಾರಲ್‌ಒಂದಕ್ಕೆ 55.7 ಡಾಲರ್ ದರಕ್ಕೆ ತಲುಪಿದೆ. ಆದರೆ ತೈಲದ ಬೇಡಿಕೆ ಹೆಚ್ಚಿಲ್ಲ. ಅತಿದೊಡ್ಡ ತೈಲೋತ್ಪಾದಕ ರಾಷ್ಟ್ರ ಸೌದಿಅರೇಬಿಯ ಕಚ್ಚಾ ತೈಲವನ್ನು ಮೇ ತಿಂಗಳಲ್ಲಿರಿಯಾಯತಿ ದರದಲ್ಲಿ ಮಾರಾಟ ಮಾಡಿದೆ. ರಷ್ಯ ಸಹಿತ ತೈಲೋತ್ಪಾದಕ ದೇಶಗಳು ಉತ್ಪಾದನೆ ಕಡಿಮೆಗೊಳಿಸಲು ಚಿಂತನೆನಡೆಸುತ್ತಿದೆ.







