ಇಲ್ಲಿ ವಾಹನ ಚಲಾಯಿಸುವಾಗ ಮೊಬೈಲಲ್ಲಿ ಮಾತಾಡಿದರೆ ಪುನಃ ಡ್ರೈವಿಂಗ್ ಟೆಸ್ಟ್!

ಪುಣೆ, ಎ. 14: ವಾಹನ ಚಲಾಯಿಸುವಾಗ ಮೊಬೈಲ್ ಫೋನ್‌ನಲ್ಲಿ ಮಾತಾಡಿದರೆ ಡ್ರೈವಿಂಗ್ ಲೈಸನ್ಸ್ ವಶಪಡಿಸಿ, ಪುನಃ ಡ್ರೈವಿಂಗ್ ಟೆಸ್ಟ್ ನಡೆಸಲು ಪುಣೆ ಆರ್‌ಟಿಒ ನಿರ್ಧರಿಸಿದೆ. ಲೈಸನ್ಸ್ ವಶಪಡಿಸಿಕೊಂಡು ತೊಂಬತ್ತು ದಿವಸವಾದ ಬಳಿಕ ಪುನಃ ಡ್ರೈವಿಂಗ್ ಟೆಸ್ಟ್ ನಡೆಸಲಾಗುತ್ತದೆ. ಮಹಾರಾಷ್ಟ್ರ ರಾಜ್ಯ ಸಾರಿಗೆ ಆಯೋಗ 2015ರಲ್ಲಿ ಹೊರಡಿಸಿದ ಪ್ರಕಟನೆ ವತ್ತು ಮೋಟಾರು ವಾಹನ ಕಾನೂನಿನಲ್ಲಿ ಆರ್‌ಟಿಒದ ಹೊಸ ಕ್ರಮಕ್ಕೆ ಪೂರಕವಾಗಿದೆ ಎಂದು ಪ್ರಾದೇಶಿಕ ಉಪ ಸಾರಿಗೆ ಅಧಿಕಾರಿ ಆಫಿಸರ್ ಸಂಜಯ್ ರಾವುತ್ ಹೇಳಿದರು.
ನಿಲುಗಡೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಕಳೆದ ದಿವಸ ಪುಣೆ ನಗರಸಭೆ ಆಡಳಿತಪಕ್ಷದ ಓರ್ವ ಸದಸ್ಯನನ್ನುಸಂಚಾರ ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಹೊಸ ಕ್ರಮವನ್ನು ಜನರು ಸ್ವಾಗತಿಸಿದ್ದಾರೆ.
Next Story





