ಫೇಸ್‌ಬುಕ್ ನಲ್ಲಿ ಪರಿಚಯವಾದ ಗೃಹಿಣಿಯನ್ನು ಫೈವ್‌ಸ್ಟಾರ್ ಹೊಟೇಲ್‌ಗೆ ಕರೆದು ಅತ್ಯಾಚಾರ !

ಮುಂಬೈ,ಎ.14: ಫೇಸ್‌ಬುಕ್‌ಮೂಲಕ ಪರಿಚಿತನಾದ ಗುಜರಾತ್ ಮೂಲದ ಉದ್ಯಮಿಯೊಬ್ಬ 40ವರ್ಷ ವಯಸ್ಸಿನ ಗೃಹಿಣಿಯನ್ನು ಕಾಫಿಕುಡಿಯುವ ನೆಪದಲ್ಲಿ ಬಾಂದ್ರ ಫೈವ್‌ಸ್ಟಾರ್ ಹೊಟೇಲ್‌ಗೆ ಕರೆದುಕೊಂಡು ಬಂದು ಅತ್ಯಾಚಾರ ನಡೆಸಿದ್ದಾನೆ. ಈಗ ಉದ್ಯಮಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದಗೃಹಿಣಿಮತ್ತು ಉದ್ಯಮಿ ಫೇಸ್‌ಬುಕ್ ಮೂಲಕ ಪರಿಚಿತರಾಗಿದ್ದರು. ತಮ್ಮಮೊಬೈಲ್ ಫೋನ್ ನಂಬರ್‌ಗಳನ್ನು ಪರಸ್ಪರ ಹಸ್ತಾಂತರಿಸಿಕೊಂಡಿದ್ದರು.
ಉದ್ಯಮಿ ಈ ಸಲುಗೆಯಲ್ಲಿ ಗೃಹಿಣಿಯನ್ನು ತಾನು ಉಳಿದುಕೊಂಡಿದ್ದ ಹೊಟೇಲ್ ಕೋಣೆಗೆ ಕಾಫಿಕುಡಿಯುವ ನೆಪದಲ್ಲಿ ಕರೆದು ಕೊಂಡು ಹೋಗಿದ್ದಾನೆ. ನಂತರ ಮಾದಕವಸ್ತು ಬೆರೆಸಿದ ನೀರನ್ನು ಕುಡಿಯಲು ಕೊಟ್ಟು, ಗೃಹಿಣಿಯ ಅತ್ಯಾಚಾರ ನಡೆಸಿದ್ದಾನೆ.
ಅತ್ಯಾಚಾರಕೀಡಾದದ್ದನ್ನು ಗೃಹಿಣಿ ತನ್ನ ಪತಿಗೆ ತಿಳಿಸಿದ್ದಾಳೆ. ನಂತರ ಪತಿ,ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಗುಜರಾತ್‌ನ್ನು ಕೇಂದ್ರವಾಗಿಟ್ಟುವ್ಯಾಪಾರ ನಡೆಸುವ ಉದ್ಯಮಿಯನ್ನು ಇದೀಗ ಪೊಲೀಸರು ಹುಡುಕುತ್ತಿದ್ದಾರೆ.
Next Story