ಕರಾವಳಿಯಲ್ಲಿ ಕ್ರೈಸ್ತರಿಂದ ಶುಭ ಶುಕ್ರವಾರ ಆಚರಣೆ

ಮಂಗಳೂರು, ಎ.14: ಯೇಸು ಕ್ರಿಸ್ತರು ಶಿಲುಬೆಗೇರಿದ ಸ್ಮರಣಾರ್ಥ ಇಂದು ಕ್ರೈಸ್ತರು ಶುಭ ಶುಕ್ರವಾರವನ್ನು ಆಚರಿಸಿದ್ದು, ಅದರಂಗವಾಗಿ ನಗರ ಹಾಗೂ ಜಿಲ್ಲೆಯ ಎಲ್ಲಾ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಯ ಜತೆಗೆ ಶಿಲುಬೆಯ ಆರಾಧನೆ ನೆರವೇರಿಸಲಾಯಿತು.
ಮಂಗಳೂರಿನ ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ರೊಸಾರಿಯೋ ಕೆಥೆಡ್ರಲ್‌ನಲ್ಲಿ ನಡೆದ ಶಿಲುಬೆಯ ಹಾದಿ ಆಚರಣೆ ಮತ್ತು ಪ್ರಾರ್ಥನಾ ಕಾರ್ಯಕ್ರಮಗಳಲ್ಲಿ ನೇತೃತ್ವ ವಹಿಸಿದ್ದರು. ಚರ್ಚ್‌ನ ಪ್ರಧಾನ ಗುರು ಾ. ಜೆ.ಬಿ.ಕ್ರಾಸ್ತಾ ಮತ್ತು ಇತರ ಧರ್ಮಗುರುಗಳು ಭಾಗವಹಿಸಿದ್ದರು.
ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ, ‘‘ಲೋಕ ಕಲ್ಯಾಣಕ್ಕಾಗಿ ಶಿಲುಬೆಯಲ್ಲಿ ಪ್ರಾಣಾರ್ಪಣೆ ಮಾಡಿದ ಯೇಸು ಕ್ರಿಸ್ತರು ನಮ್ಮೆಲ್ಲರ ಸಂಕಷ್ಟಗಳನ್ನು ನಿವಾರಿಸಲಿ’’ ಎಂದು ಪ್ರಾರ್ಥಿಸಿದರು. ‘‘ಯೇಸು ಅನುಭವಿಸಿದ ಕಷ್ಟ ಸಂಕಷ್ಟಗಳ ಸ್ಮರಣೆಯು ನಮಗೆ ನಮ್ಮ ಸಂಕಷ್ಟಗಳನ್ನು ಸಹಿಸಲು, ದ್ವೇಷ ಅಸೂಯೆಗಳನ್ನು ತೊರೆದು ಸತ್ಯ ಮಾರ್ಗದಲ್ಲಿ ನಡೆಯಲು, ಹಿಂಸೆಯನ್ನು ತೊರೆದು ಅಹಿಂಸೆಯ ಹಾದಿಯಲ್ಲಿ ನಡೆಯಲು ಸ್ಪೂರ್ತಿಯನ್ನು ನೀಡಲಿ’’ ಎಂದು ಅವರು ಶುಭ ನುಡಿದರು.
ಸಂಜೆ ನಡೆದ ಕಾರ್ಯಕ್ರಮದಲ್ಲಿ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ರೀತಿ ಮತ್ತು ಮೃತ ಶರೀರವನ್ನು ಶಿಲುಬೆಯಿಂದ ಕೆಳಗಿಳಿಸುವ ಪ್ರಕ್ರಿಯೆಯನ್ನು ಸಾಂಕೇತಿಕವಾಗಿ ನಡೆಸಲಾಯಿತು ಹಾಗೂ ಬಳಿಕ ಅದನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವ ಪ್ರಕ್ರಿಯೆ ನೆರವೇರಿತು. ವಿಶೇಷವಾಗಿ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದಂದಿನಿಂದ ಮೊದಲ್ಗೊಂಡು ಅವರು ಶಿಲುಬೆಯಲ್ಲಿ ತಮ್ಮ ಪ್ರಾಣವನ್ನು ತ್ಯಜಿಸಿ ಅವರ ಶರೀರವನ್ನು ಸಮಾಧಿ ಮಾಡುವಲ್ಲಿ ವರೆಗಿನ 14 ಪ್ರಮುಖ ಘಟನಾವಳಿಗೆ ಸಂಬಂಧಿಸಿದ ‘ಶಿಲುಬೆಯ ಹಾದಿ ’ (ವೇ ಆ್ ದಿ ಕ್ರಾಸ್) ಆಚರಣೆಯನ್ನು ಚರ್ಚ್ ಮತ್ತು ಚರ್ಚ್ ಆವರಣದಲ್ಲಿ ನಡೆಸುವ ಮೂಲಕ ಯೇಸು ಕ್ರಿಸ್ತರು ಅನುಭವಿಸಿದ ಕಷ್ಟ- ಸಂಕಷ್ಟಗಳನ್ನು ಕ್ರೈಸ್ತರು ಸ್ಮರಿಸಿಕೊಳ್ಳುತ್ತಾರೆ.
ಮಾತ್ರವಲ್ಲದೆ ಈ ದಿನವನ್ನು ಕ್ರೈಸ್ತ ಬಾಂಧವರು ಯೇಸುವಿನ ಧ್ಯಾನ ಹಾಗೂ ಉಪವಾಸದಲ್ಲಿ ಕಳೆಯುತ್ತಾರೆ. ಯೇಸು ಕ್ರಿಸ್ತರು ಲೋಕ ಕಲ್ಯಾಣಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದರು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಈ ಆಚರಣೆ ಭಕ್ತಿ, ಶ್ರದ್ಧೆಯಿಂದ ನಡೆಸಲಾಗುತ್ತದೆ. ಶುಭ ಶುಕ್ರವಾರದಂದು ವೌನ ವಾತಾವರಣದಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
ಚರ್ಚ್‌ಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಾರ್ಥನೆ, ಧ್ಯಾನ, ಶಿಲುಬೆಯ ಆರಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.







