ತೆಂಗಿನ ಮರ ಹತ್ತಲು ಉಚಿತ ತರಬೇತಿ, ಮರಹತ್ತುವ ಯಂತ್ರ ವಿತರಣೆ
ಮಂಗಳೂರು,ಎ.14: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ತೆಂಗಿನ ಮರ ಹತ್ತುವ ಬಗ್ಗೆ ಉಚಿತ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ನುರಿತ ತರಬೇತುದಾರರು ಪ್ರಾಯೋಗಿಕ ತರಬೇತಿ ನೀಡುವರು. ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದವರಿಗೆ ತೆಂಗಿನ ಮರ ಹತ್ತುವ ಯಂತ್ರವನ್ನು ಬಡ್ಡಿರಹಿತ ಸುಲಭ ಕಂತು ಸಾಲದಲ್ಲಿ ನೀಡಲಾಗುವುದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ-ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್(ರಿ), ವಿಶ್ವಾಸ್ ಕ್ರೌನ್, ಕಂಕನಾಡಿ ಮಂಗಳೂರು-2, ದೂ. 0824-4267883 ಹಾಗೂ 9972283365 ಸಂಪರ್ಕಿಸಬಹುದೆಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಿ.ಅಬ್ದುಲ್ ಹಮೀದ್ ಕಣ್ಣೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





