ಗಣ್ಯರ ಜಯಂತಿ,ಪುಣ್ಯತಿಥಿಗಳಿಗೆ ಉ.ಪ್ರ.ಶಾಲೆಗಳಿಗೆ ರಜಾ ರದ್ದು

ಲಕ್ನೋ,ಎ.14: ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವಾದ ಶುಕ್ರವಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿರುವ ಉತ್ತರ ಪ್ರದೇಶದ ಆದಿತ್ಯನಾಥ ಸರಕಾರವು ಗಣ್ಯವ್ಯಕ್ತಿಗಳ ಜಯಂತಿ ಮತ್ತು ಪುಣ್ಯತಿಥಿಗಳಂದು ಶಾಲೆಗಳಿಗೆ ರಜೆಗಳನ್ನು ರದ್ದುಗೊಳಿಸಿದೆ.
ಇಲ್ಲಿಯ ಅಂಬೇಡ್ಕರ್ ಮಹಾಸಭಾದ ಕ್ಯಾಂಪಸ್‌ನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಆದಿತ್ಯನಾಥ ಅವರು, ಇಂತಹ ಸಂದರ್ಭಗಳಲ್ಲಿ ಶಾಲೆಗಳನ್ನು ಮುಚ್ಚುವ ಸಂಪ್ರದಾಯ ನಿಲ್ಲಬೇಕು ಎಂದರು. ಇನ್ನು ಮುಂದೆ ಈ ದಿನಗಳಲ್ಲಿ ಶಾಲೆಗಳು ತೆರೆದಿರುತ್ತವೆ ಮತ್ತು ಈ ಗಣ್ಯವ್ಯಕ್ತಿಗಳ ಕುರಿತು ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು.
Next Story





