ಝಕಾತ್ ಫಂಡ್ ವತಿಯಿಂದ ರಿಕ್ಷಾ ವಿತರಣೆ

ಉಡುಪಿ, ಎ.14: ಉಡುಪಿ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ಇದರ ಝಕಾತ್ ಫಂಡ್ ವತಿಯಿಂದ ಶುಕ್ರವಾರ ರಿಕ್ಷಾ ವಿತರಣಾ ಕಾರ್ಯಕ್ರಮವು ಉಡುಪಿ ಜಾಮೀಯ ಮಸೀದಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಹಸನ್ ಉಚ್ಚಿಲ, ಅಬ್ದುಲ್ ಕಲೀಮ್ ಬೆಳಪು, ಜಲೀಲ್ ಎಸ್. ಪಡುತೋನ್ಸೆ ಎಂಬವರಿಗೆ ರಿಕ್ಷಾ ಹಸ್ತಾಂತರಿಸಲಾಯಿತು.
ಈ ಸಂದರ್ಭ ವೆಲ್‌ಫೇರ್ ಅಸೋಸಿಯೇಶನ್ ಅಧ್ಯಕ್ಷ ಕಲ್ಯಾಣಪುರ ಅಬ್ದುಲ್ ಗಫೂರ್, ಕಾರ್ಯದರ್ಶಿ ರಿಯಾಝ್ ಅಹ್ಮದ್, ಮಸೀದಿಯ ಅಧ್ಯಕ್ಷ ಸೈಯ್ಯದ್ ಯಾಸೀನ್, ಮೌಲಾನ ರಶೀದ್ ಉಮ್ರಿ, ಯು. ಇಬ್ರಾಹೀಂ, ಖಾಲೀದ್ ಅಬ್ದುಲ್ ಅಝೀಝ್, ಅಬ್ದುಲ್ ಮಜೀದ್ ಆದಿಉಡುಪಿ, ಮುನೀರ್, ವಿ.ಎಸ್.ಉಮರ್, ಮುಹಮ್ಮದ್ ಮೌಲ, ಗುಲಾಂ ಹಯಾತ್, ಫಯಾಝ್ ಅಹ್ಮದ್ ಮತ್ತಿತರರು ಉಸ್ಥಿತರಿದ್ದರು.
Next Story





