"ನಂಡೆ ಪೆಂಙಳ್" ಅಭಿಯಾನದಡಿ 5 ಹೆಣ್ಣು ಮಕ್ಕಳ ವಿವಾಹ

ಮಂಗಳೂರು, ಎ.14: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸಾರಥ್ಯದಲ್ಲಿ "ನಂಡೆ ಪೆಂಙಳ್" ಅಭಿಯಾನದಡಿ ಬೆಳ್ತಂಗಡಿ, ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನಲ್ಲಿ 5 ಹೆಣ್ಣು ಮಕ್ಕಳ ಮದುವೆ ಕಾರ್ಯಕ್ರಮವನ್ನು ನಡೆಸಲಾಯಿತು.
ವಿವಿಧೆಡೆ ನಡೆದ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಮಾಲಿಕುದ್ದೀನಾರ್ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ, ದಾರುನ್ನೂರು ಯು.ಎ.ಇ. ಘಟಕದ ಅಧ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆ, ಫಕ್ರುದ್ದೀನ್ ಮಾಸ್ಟರ್ ಫ್ಲವರ್ಸ್, ಎಂ.ಎಸ್. ಸಾಲಿ ಮೂಲರಪಟ್ನ, ಸ್ವಾಗತ ಸಮಿತಿಯ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ, ಮುಖ್ಯ ಸಲಹೆಗಾರ ಎಸ್.ಎಂ. ರಶೀದ್ ಹಾಜಿ, ಉಪಾಧ್ಯಕ್ಷ ಬಿ.ಎಚ್. ಅಸ್ಗರ್ ಅಲಿ, ಕೋಶಾಧಿಕಾರಿ ಅಬ್ದುಲ್ ರವೂಫ್ ಪುತ್ತಿಗೆ, ಸಂಘಟನಾ ಕಾರ್ಯದರ್ಶಿ ರಿಯಾಝ್ ಅಹಮದ್ ಕಣ್ಣೂರು, ಪರಿಶೀಲನಾ ತಂಡದ ಮುಖ್ಯಸ್ಥ ಸುಲೈಮಾನ್ ಶೇಖ್ ಬೆಳುವಾಯಿ, ಪ್ರಚಾರ ತಂಡದ ಮುಖ್ಯಸ್ಥ ರಫೀಕ್ ಮಾಸ್ಟರ್, ಸರ್ವೆ ತಂಡದ ಮುಖ್ಯಸ್ಥ ಡಿ. ಅಬ್ದುಲ್ ಹಮೀದ್ ಕಣ್ಣೂರು, ಸಂಚಾಲಕ ಮುಹಮ್ಮದ್ ಯು.ಬಿ., ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ಅಬ್ದುಲ್ ಸಲಾಂ ಮುಸ್ಲಿಯಾರ್ ಪೆರ್ನೆ, ಮಜೀದ್ ತುಂಬೆ, ಅಸ್ಫರ್ ಹುಸೈನ್, ಹುಸೈನ್ ಬಡಿಲ, ಜಸೀಂ ಸಜಿಪ, ಅಸ್ಲಂ ಗೂಡಿನಬಳಿ ಮೊದಲಾದವರು ಉಪಸ್ಥಿತರಿದ್ದರು.
"ನಂಡೆ ಪೆಂಙಳ್" ಅಭಿಯಾನದಡಿ ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನಲ್ಲಿ 2 ಮತ್ತು ಮಂಗಳೂರು ತಾಲೂಕಿನಲ್ಲಿ ಒಂದು ವಿವಾಹ ಕಾರ್ಯಕ್ರಮ ನಡೆಸಲಾಗಿದೆ.





