ಸುನ್ನೀ ಉಲಮಾ ನಾಯಕರ ಅನುಸ್ಮರಣೆ ಕಾರ್ಯಕ್ರಮ
ಸಾಲೆತ್ತೂರು, ಎ.14: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಮಿತ್ತರಾಜೆ ಶಾಖೆಯ ವತಿಯಿಂದ ಆಯೋಜಿಸಿದ್ದ 2 ದಿವಸಗಳ ಕಥಾಪ್ರಸಂಗ ಹಾಗೂ ಸುನ್ನೀ ಉಲಮಾ ನಾಯಕರ ಅನುಸ್ಮರಣಾ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಕರ್ನಾಟಕ ರಾಜ್ಯ ಹನೀಫಿ ಸಂಘಟನಾ ಕಾರ್ಯದರ್ಶಿ ಶರೀಫ್ ಹನೀಫಿ ಮಾರ್ನಾಡ್ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮದ ಅಧಕ್ಷತೆಯನ್ನು ಖತೀಬ್ ಅಬೂಬಕರ್ ಮದನಿ ಪಂಜರಕೋಡಿ ವಹಿಸಿದ್ದರು. ಸೈಯದ್ ಮುಷ್ತಾಖುರ್ರಹ್ಮಾನ್ ತಂಙಳ್ ಚಟ್ಟೆಕಲ್ ದುಆ ನೆರೆವೇರಿಸಿದರು.
ಡಿಎಂಎ ಕುಂಞಿ ಮದನಿ ಅಡೂರ್ ಆದಂ ಮದನಿ ಆತೂರ್ ಸಂಗಡಿಗರು ಕಥಾಪ್ರಸಂಗ ನಿರೂಪಿಸದರು. ಮಿತ್ತೂರು ದಅವಾ ಕಾಲೇಜಿನ ವಿದ್ಯಾರ್ಥಿ ಹಂಝತುಲ್ ಕರ್ರಾರ್ ಮಿತ್ತರಾಜೆ ಸ್ವಾಗತಿಸಿ ವಂದಿಸಿದರು.
Next Story





