ಮುಂಡಗೋಡ: ಸಿಡಿಲು ಬಡಿದು ಕುರಿಗಾಹಿ ಮೃತ್ಯು

ಮುಂಡಗೋಡ, ಎ.14: ಕುರಿಗಳನ್ನು ಮೇಯಿಸುತ್ತಿದ್ದ ಸಂದರ್ಭ ಸಿಡಿಲು ಬಡಿದು ಕುರಿಗಾಹಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಪಾಳಾ ಗ್ರಾಮದ ಅರೇಗೊಪ್ಪ-ಪಾಳಾ ರಸ್ತೆಯ ಗದ್ದೆಯೊಂದರಲ್ಲಿ ಶುಕ್ರವಾರ ಸಂಜೆ ನಡೆದಿದೆ. ಮೃತಪಟ್ಟವರನ್ನು ಪಾಳಾ ಗ್ರಾಮದ ಸೊಸೈಟಿ ರಸ್ತೆಯ ನಿವಾಸಿ ಹನಮಂತಪ್ಪ ಭೋವಿವಡ್ಡರ (52) ಎನ್ನಲಾಗಿದೆ.
ಹನಮಂತಪ್ಪ ಅವರು ತನ್ನ ಸಹೋದರಿಯ ಜೊತೆ 40 ಕುರಿಗಳನ್ನು ಗದ್ದೆಗಳಲ್ಲಿ ಮೇಯಿಸುತ್ತಿದ್ದರು. ಮಳೆ ಸುರಿಯಲು ಪ್ರಾರಂಭಿಸಿದ್ದರಿಂದ ಇವರಿಬ್ಬರೂ ಮನೆಗೆ ಹಿಂತಿರುಗಲು ಮುಂದಾಗಿದ್ದರು. ಇದೇ ಸಂದರ್ಭ ಸಿಡಿಲು ಬಡಿದಿದ್ದು, ಹನಮಂತಪ್ಪ ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪಿಎಸ್ಸೈ ಲಕ್ಕಪ್ಪ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Next Story





