ಲಕ್ಕಿ ಗ್ರಾಹಕ ಯೋಜನೆ: 1ಕೋ.ರೂ.ಗೆದ್ದ ಲಾತೂರಿನ ಯುವತಿ

ನಾಗ್ಪುರ,ಎ.14: ನಗದುರಹಿತ ವಹಿವಾಟುಗಳನ್ನು ಉತ್ತೇಜಿಸಲು ಜಾರಿಗೊಳಿಸ ಲಾಗಿರುವ ಲಕ್ಕಿ ಗ್ರಾಹಕ್ ಯೋಜನೆಯ ಮೆಗಾ ಡ್ರಾದಲ್ಲಿ ಒಂದು ಕೋಟಿ ರೂ. ಬಹುಮಾನವನ್ನು ಗೆದ್ದಿರುವ ಲಾತೂರಿನ ಎರಡನೇ ವರ್ಷದ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಶ್ರದ್ಧಾ ಮೆಂಗಶೆಟ್ಟಿ(20) ಅವರು ಶುಕ್ರವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಬಹುಮಾನದ ಮೊತ್ತವನ್ನು ಸ್ವೀಕರಿಸಿದರು.
ಶ್ರದ್ಧಾ ತನ್ನ ಹೊಸ ಮೊಬೈಲ್ ಫೋನ್‌ನ ಇಎಂಐ ಕಟ್ಟಲು ತನ್ನ ರುಪೇ ಕಾರ್ಡ್‌ನಲ್ಲಿ 1,590 ರೂ.ಗಳ ವಹಿವಾಟು ನಡೆಸಿದ್ದರು.
ಲಕ್ಕಿ ಗ್ರಾಹಕ್ ಯೋಜನೆ ಮತ್ತು ಡಿಜಿಧನ್ ವ್ಯಾಪಾರ ಯೋಜನೆಗಳಲ್ಲಿ ಈವರೆಗೆ 16 ಲಕ್ಷ ಅಧೃಷ್ಟಶಾಲಿಗಳು 258 ಕೋ.ರೂ.ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ.
Next Story





