ದಲಿತರನ್ನು ಓಲೈಸಲು ಬಿಜೆಪಿಯಿಂದ ಅಂಬೇಡ್ಕರ್ ಜನ್ಮದಿನಾಚರಣೆ: ದಸಂಸ
ಬೆಳ್ತಂಗಡಿ, ಎ.14: ಡಾ.ಅಂಬೇಡ್ಕರ್ ಅವರನ್ನು ಕೇವಲ ದಲಿತ ನಾಯಕರೆಂದು ಸಂಕುಚಿತವಾಗಿ ಬಿಂಬಿಸಿ, ದಲಿತರನ್ನು ಓಲೈಸಿ ಪಕ್ಷಕ್ಕೆ ಸೇರಿಸಲು ಬಿಜೆಪಿ ಅಂಬೇಡ್ಕರ್ ಜನ್ಮದಿನಾಚರಣೆ ಮಾಡುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.
ಪಕ್ಷದ ಬೆಳ್ತಂಗಡಿ ಮಂಡಲವು ಎ.17 ರಂದು 125 ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶುಚಿತ್ವದ ಕೆಲಸದಲ್ಲಿ ತೊಡಗಿಸಿಕೊಂಡ ದಲಿತ ನೌಕರರನ್ನು ಗುರುತಿಸುವುದನ್ನು ಸಮಿತಿ ಖಂಡಿಸಿದೆ. ಸನ್ಮಾನ ಕಾರ್ಯಕ್ರಮವು ರಾಜಕೀಯ ಲಾಭದ ಹುನ್ನಾರವಾಗಿದ್ದು, ದಿಕ್ಕುತಪ್ಪಿಸುವಂತಹದ್ದಾಗಿದೆ. ಇದನ್ನು ದಲಿತರು ಬಹಿಷ್ಕರಿಸಬೇಕು ಎಂದು ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
Next Story





