8 ಅವಯವ ಹೊಂದಿದ ಇರಾಕ್‌ನ ಮಗುವಿಗೆ ಭಾರತದಲ್ಲಿ ಯಶಸ್ವೀ ಶಸ್ತ್ರಚಿಕಿತ್ಸೆ

ಹೊಸದಿಲ್ಲಿ, ಎ.14: ಎಂಟು ಅಂಗಗಳನ್ನು ಹೊಂದಿದ್ದ ಇರಾಕಿನ ಮಗುವೊಂದಕ್ಕೆ ನೋಯ್ಡೆದ ಜೇಪೀ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಕರಮ್ ಎಂಬ ಏಳು ತಿಂಗಳ ಹಸುಳೆ ಪಾಲಿಮೇಲಿಯಾ ಎಂಬ ಅಪರೂಪದ ದೇಹಲಕ್ಷಣದೊಂದಿಗೆ ಜನಿಸಿತ್ತು. ಈ ಸ್ಥಿತಿಯಲ್ಲಿ ಜನಿಸುವ ಹಸುಳೆಗಳಿಗೆ ಸಾಮಾನ್ಯವಾಗಿ ಇರುವುದಕ್ಕಿಂತ ಹೆಚ್ಚಿನ ಅವಯವಗಳು ಇರುತ್ತವೆ. ಕರಮ್‌ಗೆ ಒಟ್ಟು ಎಂಟು ಅವಯವಗಳಿದ್ದವು. ಇದರಲ್ಲಿ ಎರಡು ಹೊಟ್ಟೆುಂದ ಹೊರ ಚಾಚಿದ ಸ್ಥಿತಿಯಲ್ಲಿದ್ದವು.
ಕರಮ್‌ನನ್ನು ಆಸ್ಪತ್ರೆಗೆ ಪ್ರಥಮ ಬಾರಿ ಚಿಕಿತ್ಸೆಗೆಂದು ತಂದಾಗ ಆ ಮಗು ಹುಟ್ಟಿ ಕೇವಲ ಹದಿನೈದು ದಿನಗಳಾಗಿದ್ದವು. ಮಗುವಿನ ಸ್ಥಿತಿ ಗಂಭೀರವಾಗಿತ್ತು. ಮಗುವಿನ ದೇಹಸ್ಥಿತಿ ಗಮನಿಸಿ ಮೂರು ಹಂತಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಯಿತು ಎಂದು ಆಸ್ಪತ್ರೆಯ ಹಿರಿಯ ವೈದ್ಯ ಡಾ. ಜಿ.ಗೌರವ್ ರಾಥೋರ್ ತಿಳಿಸಿದ್ದಾರೆ.
ಪ್ರಥಮ ಹಂತದಲ್ಲಿ ಮಗುವಿನ ಹೊಟ್ಟೆಯಿಂದ ಹೊರಚಾಚಿದ್ದ ಎರಡು ಅಂಗಗಳನ್ನು ತೆಗೆದು ಹಾಕಲಾಯಿತು. ಆ ಬಳಿಕ ಮಗುವಿನ ಸಹಿತ ಹೆತ್ತವರು ಇರಾಕಿಗೆ ಮರಳಿದರು. ಕೆಲ ದಿನದ ಬಳಿಕ ಮತ್ತೊಂದು ಶಸ್ತ್ರ ಚಿಕಿತ್ಸೆ ನಡೆಸಿ ಇನ್ನೆರಡು ಅಂಗಗಳನ್ನು ಬೇರ್ಪಡಿಸಲಾಯಿತು. ಈಗ ಎಲ್ಲಾ ಮಕ್ಕಳಂತೆ ಕರಮ್ ಕೂಡಾ 2 ಕಾಲು, 2 ಕೈಗಳನ್ನು ಹೊಂದಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಆದರೆ ಆತನ ಎಡಗಾಲು ಸಮರ್ಪಕ ಬೆಳವಣಿಗೆ ಹೊಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ವೈದ್ಯರು ಮತ್ತೊಂದು ಶಸ್ತ್ರಚಿಕ್ತಿಸೆ ನಡೆಸಿದ್ದು , ಆತನ ದೇಹದಿಂದ ಈ ಹಿಂದೆ ಬೇರ್ಪಡಿಸಿದ್ದ ಅವಯವದ ಸ್ನಾಯುಗಳನ್ನು ಕರಮ್‌ನ ಎಡಗಾಲಿಗೆ ಕಸಿ ಮಾಡಲಾಗಿದೆ.