ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣ ಲೂಟಿ
ಕುಶಾಲನಗರ ಎ.14: ಪಟ್ಟಣ ವ್ಯಾಪ್ತಿಯ ಬಸಪ್ಪ ಬಡವಾಣೆಯಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು, ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣ ದೋಚಿರುವ ಘಟನೆ ವರದಿಯಾಗಿದೆ. ಕುಶಾಲಪ್ಪ ಎಂಬವರ ಮನೆಯಲ್ಲಿ, ಯಾರು ಇಲ್ಲದ ಸಮಯದಲ್ಲಿ ಮನೆಯ ಹಿಂಬದಿಯ ಬಾಗಿಲನ್ನು ಮುರಿದು ಸಮಾರು 2.40 ಲಕ್ಷ ರೂ.ಬೆಲೆಬಾಳುವ ಚಿನ್ನಾಭರಣ ಮತ್ತು 10 ಸಾವಿರ ರೂಗಳನ್ನು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆ ತಿಳಿಯುತ್ತಿದ್ದಂತೆ, ವೃತ್ತನಿರೀಕ್ಷ ಕ್ಯಾತೆಗೌಡ, ನಗರ ಪೊಲೀಸ್ ಠಾಣಾಧಿಕಾರಿ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ದೂರನ್ನು ದಾಖಲಿಸಿಕೊಂಡಿದ್ದು, ಮಡಿಕೇರಿಯಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞ್ಞರನ್ನು ಕರೆಸಿಕೊಂಡು ಪರಿಶೀಲಿಸಿ ಮುಂದಿನ ಕಾರ್ಯಕೈಗೊಂಡಿದ್ದಾರೆ.
Next Story





