ಮಲ್ಪೆ ಠಾಣಾ ಕಾನ್ ಸ್ಟೇಬಲ್ ಅಮಾನತು ಆದೇಶ ಹಿಂಪಡೆದ ಇಲಾಖೆ
ಉಡುಪಿ, ಎ.14: ತನ್ನ ಪತ್ನಿಗೆ ಕಿರುಕುಳ ನೀಡಿದ್ದ ಎಂದು ಆರೋಪಿಸಿ ಕುಮಾರ್ ಎಂಬವನಿಗೆ ಹಲ್ಲೆ ನಡೆಸಿದ್ದ ಮಲ್ಪೆ ಠಾಣಾ ಕಾನ್ ಸ್ಟೇಬಲ್ ಪ್ರಕಾಶ್ ರನ್ನು ಅಮಾನತು ಮಾಡಿದ್ದ ಪೊಲೀಸ್ ಇಲಾಖೆ ಇದೀಗ ಆದೇಶವನ್ನು ಹಿಂಪಡೆದಿದೆ.
ಸಚಿವ ಪ್ರಮೋದ್ ಮಧ್ವರಾಜ್ ರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ ಎಂಬಾತ ತನ್ನ ಪತ್ನಿಗೆ ಕಿರುಕುಳ ನೀಡಿದ್ದ ಎಂದು ಆರೋಪಿಸಿ ಪ್ರಕಾಶ್ ಹಲ್ಲೆ ನಡೆಸಿದ್ದರು ಎನ್ನಲಾಗಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ಪ್ರಕಾಶ್ ರನ್ನು ಎಪ್ರಿಲ್ 8 ರಂದು ಅಮಾನತು ಮಾಡಲಾಗಿತ್ತು. ಈ ನಡುವೆ ಸಚಿವ ಪ್ರಮೋದ್ ಮದ್ವರಾಜ್ ತನ್ನ ಅಧಿಕಾರದ ಪ್ರಭಾವ ಬಳಸಿ ಅಮಾನತು ಮಾಡಿದ್ದರು ಎನ್ನುವ ಆರೋಪಗಳೂ ಕೇಳಿಬಂದಿತ್ತು.
Next Story





