ಹಳಿ ತಪ್ಪಿದ ಮೀರತ್-ಲಕ್ನೋ ರಾಜ್ಯ ರಾಣಿ ಎಕ್ಸ್‌ಪ್ರೆಸ್ ರೈಲು: 10 ಪ್ರಯಾಣಿಕರಿಗೆ ಗಾಯ

ಬರೇಲಿ, ಎ.15: ಲಕ್ನೋಗೆ ತೆರಳುತ್ತಿದ್ದ ಮೀರತ್-ಲಕ್ನೋ ರಾಜ್ಯ ರಾಣಿ ಎಕ್ಸ್‌ಪ್ರೆಸ್ ರೈಲಿನ 8 ಬೋಗಿಗಳು ಹಳಿ ತಪ್ಪಿದ ಘಟನೆ ಶನಿವಾರ ಬೆಳಗ್ಗೆ 8:15ಕ್ಕೆ ಉತ್ತರಪ್ರದೇಶದ ರಾಂಪುರದ ಸಮೀಪ ನಡೆದಿದೆ.
ಘಟನೆ ನಡೆದ ತಕ್ಷಣವೇ ಮೊರಾದಾಬಾದ್ ಡಿಆರ್‌ಎಂ ಪ್ರಮೋದ್ ಕುಮಾರ್ ಸಹಿತ ಉನ್ನತ ರೈಲ್ವೇ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಹಲವಾರು ವೈದ್ಯಕೀಯ ಘಟಕಗಳು ಕಾರ್ಯಪ್ರವೃತ್ತವಾಗಿವೆ.
ಮೂಲಗಳ ಪ್ರಕಾರ, ಘಟನೆಯಲ್ಲಿ 10ಕ್ಕೂ ಅಧಿಕ ಜನರಿಗೆ ಗಾಯವಾಗಿದೆ. ಆದರೆ ಯಾರಿಗೂ ಗಂಭೀರ ಸ್ವರೂಪದ ಗಾಯವಾಗಿಲ್ಲ. ಬೋಗಿಗಳು ಹಳಿ ತಪ್ಪಿರುವ ಕಾರಣ ದಿಲ್ಲಿ-ಲಕ್ನೋ ರೂಟ್‌ನಲ್ಲಿ ಸಂಚರಿಸುವ ಒಂದು ಡಜನ್ ರೈಲುಗಳು ಅನಿರ್ದಿಷ್ಟಾವಧಿ ತಡವಾಗಿ ಸಂಚರಿಸುತ್ತಿದ್ದು, ಇನ್ನು ಕೆಲವು ರೈಲುಗಳನ್ನು ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





