ಎ.17ರಂದು ನಿಗದಿಯಾಗಿದ್ದ ಕೆಂಪೇಗೌಡ ಜನ್ಮ ದಿನಾಚರಣೆ ರದ್ದು

ಬೆಂಗಳೂರು, ಎ.15: ಎಪ್ರಿಲ್ 17ರಂದು ಆಚರಿಸಲು ಉದ್ದೇಶಿಸಿದ್ದ ನಾಡಪ್ರಭು ಕೆಂಪೇಗೌಡ ಜನ್ಮ ದಿನಾಚರಣೆಯನ್ನು ರದ್ದುಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಬೆಂಗಳೂರು ನಗರದ ಮೂಲ ನಿರ್ಮಾತೃ ಕೇಂಪೇಗೌಡ ಅವರ ಜನ್ಮ ದಿನಾಂಕದ ಬಗ್ಗೆ ಹಲವು ವೈರುದ್ಯಗಳು ಹಾಗೂ ಜಿಜ್ಞಾಸೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿಯ ಸಲಹೆಯಂತೆ ಸರಕಾರ ಈ ನಿರ್ಧಾರಕ್ಕೆ ಬಂದಿದೆ. ಆದ್ದರಿಂದ ಎ.17ರಂದು ನಿಗದಿಯಾಗಿದ್ದ ಕೆಂಪೇಗೌಡರ ಜನ್ಮ ದಿನೋತ್ಸವ ಹಾಗೂ ಸಮಾರಂಭವನ್ನು ರದ್ದುಗೊಳಿಸಲಾಗಿದೆ ಎಂದು ಸರಕಾರಿ ಆದೇಶದಲ್ಲಿ ತಿಳಿಸಲಾಗಿದೆ.
Next Story





