ಬಹರೈನ್: ಅನಿಲ ಸಿಲಿಂಡರ್ ಭೀಕರ ಸ್ಫೋಟ

ಮನಾಮ, ಎ. 15: ಮನಾಮ ನಗರದ ಹೃದಯಭಾಗವಾದ ಬಾಬುಲ್ ಬಹರೈನ್‌ನಲ್ಲಿ ಶಕ್ತಿಶಾಲಿಯಾದ ಗ್ಯಾಸ್ ಸಿಲಿಂಡರ್ ಸ್ಫೋಟ ನಡೆದಿದೆ.
ಬಾಬುಲ್ ಬಹ್ರೈನ್‌ನ ಪೊಲೀಸ್ ಠಾಣೆಯ ಸಮೀಪದ ಕಟ್ಟಡದಲ್ಲಿ ಕಳೆದ ಗುರುವಾರ ಸ್ಫೋಟ ಸಂಭವಿಸಿದೆ. ಬಾಂಗ್ಲಾದೇಶೀಯರ ಮಾಲಕತ್ವದ ಹೊಟೇಲ್‌ನಲ್ಲಿ ಘಟನೆ ನಡೆದಿದ್ದು ಯಾರಿಗೂ ಅಪಾಯ ಸಂಭವಿಸಿಲ್ಲ. ಆದರೆ ಸ್ಫೋಟದ ತೀವ್ರತೆಯಲ್ಲಿ ಸಮೀಪದ ಕಟ್ಟಡಕ್ಕೆಮತ್ತು ಹೊಟೇಲ್ ಹೊರಗಡೆ ನಿಲ್ಲಿಸಲಾಗಿದ್ದ ವಾಹನಗಳಿಗೆ ಹಾನಿಯಾಗಿದೆ.
ಕಾಂಕ್ರಿಟ್ ಸ್ಲ್ಯಾಬ್‌ಗಳು ಪುಡಿಯಾಗಿ ಹಾರಿವೆ. ಸಮೀಪದ ಸುಮಾರು ಇಪ್ಪತ್ತು ಅಂಗಡಿಗಳ ಶೆಟರ್ ಮತ್ತುಕಿಟಕಿಗಳಿಗೆ ಹಾನಿಯಾಗಿವೆ. ಸಮೀಪದ ಬಹರೈನ್ ಮಾಲ್‌ಗೂ ಹಾನಿಯಾಗಿದೆ. ದಾರಿಹೋಕನೊಬ್ಬ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾನೆ.
ಪೊಲೀಸರು ಮತ್ತು ನಾಗರಿಕ ರಕ್ಷಣಾಧಿಕಾರಿಗಳು ಸ್ಥಳಕ್ಕಾಗಮಿಸಿ ಸ್ಫೋಟದ ಕುರಿತು ತನಿಖೆ ನಡೆಸಿದ್ದಾರೆ.
Next Story





