ಎನ್.ಎಂ.ಪಿ.ಟಿ. ಟ್ರಸ್ಟಿಯಾಗಿ ಅಬೂಬಕರ್ ನೇಮಕ

ಮಂಗಳೂರು, ಎ.15: ನವಮಂಗಳೂರು ಬಂದರು ಮಂಡಳಿ(ಎನ್.ಎಂ.ಪಿ.ಟಿ.)ಯ 2017-19ರ ಅವಧಿಗೆ ಟ್ರಸ್ಟಿಯಾಗಿ ಅಬೂಬಕರ್ ಕೃಷ್ಣಾಪುರ ನೇಮಕಗೊಂಡಿದ್ದಾರೆ.
2017ರ ಎಪ್ರಿಲ್ 1ರಿಂದ 2019ರ ಮಾರ್ಚ್ 31ರವರೆಗೆ ಎರಡು ವರ್ಷಗಳ ಕಾಲ ಜಾರಿಯಲ್ಲಿರುವಂತೆ ಈ ನೇಮಕಾತಿ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಎನ್.ಎಂ.ಪಿ.ಟಿ. ನೌಕರರ ಪ್ರತಿನಿಧಿಯಾಗಿ ‘ಕೆನರಾ ಪೋರ್ಟ್ ವರ್ಕರ್ಸ್ ಯೂನಿಯನ್’ ವತಿಯಿಂದ ಅಬೂಬಕರ್ ನೇಮಿಸಲ್ಪಟ್ಟಿರುತ್ತಾರೆ.
1980ರ ಎಪ್ರಿಲ್ 1ರಿಂದ ಈ ಹುದ್ದೆಯನ್ನು ಎನ್.ಎಂ.ಅಡ್ಯಂತಾಯ ನಿರ್ವಹಿಸಿದ್ದರು.
ಅಬೂಬಕರ್ ಅವರು ಸುರತ್ಕಲ್‌ನ ಖಿಳ್‌ರಿಯಾ ಆಂಗ್ಲ ಮಾಧ್ಯಮ ಶಾಲೆ, ಬರ್ಟ್ರಂಡ್‌ರಸ್ಸೆಲ್ ಪ್ರೌಢಶಾಲೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Next Story





