ಗಂಡಂದಿರನ್ನು ‘ಏರ್‌ಕಂಡೀಶನ್’ಗೆ ಹೋಲಿಸಿದ ಸೆಹ್ವಾಗ್!

ಹೊಸದಿಲ್ಲಿ, ಎ.15: ಭಾರತದ ಮಾಜಿ ಆರಂಭಿಕ ಆಟಗಾರ ಹಾಗೂ ಟ್ವಿಟರ್‌ನ ಕಿಂಗ್ ಎಂದೇ ಬಣ್ಣಿಸಲ್ಪಡುತ್ತಿರುವ ವೀರೇಂದ್ರ ಸೆಹ್ವಾಗ್ ಪತಿಯಂದಿರನ್ನು ಏರ್‌ಕಂಡೀಶನ್‌ಗೆ ಹೋಲಿಕೆ ಮಾಡಿ ಟ್ವಿಟರ್‌ನಲ್ಲಿ ನಗೆ ಚಟಾಕಿ ಹಾರಿಸಿದ್ದಾರೆ.
ಸೆಹ್ವಾಗ್ ಟ್ವೀಟ್‌ನ್ನು ಪೋಸ್ಟ್ ಮಾಡಿದ ಎರಡೇ ಗಂಟೆಯಲ್ಲಿ 6,800 ಲೈಕ್ ಹಾಗೂ ಸಾವಿರಕ್ಕೂ ಅಧಿಕ ರೀ-ಟ್ವೀಟ್‌ಗಳು ಬಂದಿದ್ದವು. ಅಷ್ಟಕ್ಕೂ ಸೆಹ್ವಾಗ್ ಮಾಡಿದ ಟ್ವೀಟ್ ಏನು ಎಂಬುದನ್ನು ನೀವೇ ಓದಿ ಆನಂದಿಸಿ...
‘‘ಗಂಡಂದಿರ ಪರಿಸ್ಥಿತಿ ಒಡೆದುಹೋದ ಏರ್‌ಕಂಡೀಶನ್‌ನಂತೆ. ಮನೆಯ ಹೊರಗಡೆ ಎಷ್ಟೇ ಶಬ್ಧ ಮಾಡಿದರೂ, ಮನೆಯ ಒಳಗೆ ತುಂಬಾ ತಂಪು, ಶಾಂತ ಹಾಗೂ ರಿಮೋಟ್ ಕಂಟ್ರೋಲ್‌ನಂತೆೆ’’ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ಟ್ವೀಟ್‌ನ ಜೊತೆಯಲ್ಲಿ ತನ್ನ ಮೆಚ್ಚಿನ ಮಡದಿ ಆರತಿಯ ಭಾವಚಿತ್ರವನ್ನು ಹಾಕಿದ್ದಾರೆ.
‘‘ಗಂಡಂದಿರ ಬಗ್ಗೆ ಅದ್ಭುತ ವ್ಯಾಖ್ಯಾನ ನೀಡಿದ್ದೀರಿ. ನಾನು ನಿಮ್ಮ ಹಲವು ಟ್ವೀಟ್‌ನ್ನು ಓದಿದ್ದೇನೆ. ನೀವು ಒಂದು ವಿಷಯದ ಬಗ್ಗೆ ನಿಮ್ಮದೇ ಶೈಲಿಯಲ್ಲಿ ತಿಳಿಸುವ ರೀತಿ ಸರಳ ಹಾಗೂ ಅದ್ಭುತ’’ ಎಂದು ಓರ್ವ ಅಭಿಮಾನಿ ಟ್ವೀಟ್ ಮಾಡಿದ್ದಾರೆ.
ಸೆಹ್ವಾಗ್ ದಾಂಪತ್ಯ ವಿಷಯಕ್ಕೆ ಸಂಬಂಧಿಸಿ ಟ್ವೀಟ್ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಟ್ವೀಟ್ ಮಾಡಿದ್ದರು





