ಎ.18: ಸಂಯುಕ್ತ ಜಮಾಅತ್‌ನಿಂದ ಮಿತ್ತಬೈಲ್ ಉಸ್ತಾದ್, ಕಮ್ಮಾಡಿ ಹಾಜಿಗೆ ಸನ್ಮಾನ
ಪುತ್ತೂರು, ಎ.15: ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ವತಿಯಿಂದ ‘ಸಮಸ್ತ’ದ ಉಪಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ವಿದ್ವಾಂಸ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಮತ್ತು ಸಂಯುಕ್ತ ಜಮಾಅತ್ ಅಧ್ಯಕ್ಷರಾಗಿ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹಾಜಿ ಎಸ್.ಇಬ್ರಾಹೀಂ ಕಮ್ಮಾಡಿಯವರನ್ನು ಎ.18ರಂದು ಸಂಪ್ಯದ ಕಮ್ಮಾಡಿ ಸಭಾಂಗಣದಲ್ಲಿ ಸನ್ಮಾನಿಸಲಾಗುವುದು ಎಂದು ಸಂಯುಕ್ತ ಜಮಾಅತ್ ಉಪಾಧ್ಯಕ್ಷ ಕೆ.ಆರ್.ಹುಸೈನ್ ದಾರಿಮಿ ರೆಂಜಲಾಡಿ ತಿಳಿಸಿದ್ದಾರೆ.
ಅವರು ಶನಿವಾರ ಸುದ್ದಿಗೋಷ್ಠಿಯ್ಲ ಮಾತನಾಡಿ, ಸನ್ಮಾನ ಸಮಾರಂಭದಲ್ಲಿ ಸೈಯದ್ ಅಹ್ಮದ್ ಪೂಕೋಯ ತಂಙಳ್ ದುವಾರ್ಶೀವಚನ ನೀಡಲಿದ್ದಾರೆ. ಮೂಡಿಗೆರೆ ಸಂಯುಕ್ತ ಖಾಝಿ ಎಂ.ಎ.ಖಾಸಿಂ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆ ವಹಿಸುವ ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಹಾಜಿ ಎಸ್. ಇಬ್ರಾಹಿಂ ಕಮ್ಮಾಡಿಯವರನ್ನು ಸನ್ಮಾನಿಸಲಿದ್ದಾರೆ. ಶೈಖುನಾ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಅವರನ್ನು ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಎಸ್.ಇಬ್ರಾಹೀಂ ಕಮ್ಮಾಡಿ ಸನ್ಮಾನಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಬಿ.ಎ.ಶಕೂರ್ ಹಾಜಿ, ಕಾರ್ಯದರ್ಶಿ ಎಲ್.ಟಿ.ರಝಾಕ್ ಹಾಜಿ, ಖಜಾಂಚಿ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ ಮತ್ತು ಸದಸ್ಯ ಅಬ್ದುಲ್ ರಹಿಮಾನ್ ಆಝಾದ್ ಉಪಸ್ಥಿತರಿದ್ದರು.







