ದಿಲ್ಲಿ ಮೆಟ್ರೋ ಸ್ಟೇಶನ್ ದೈತ್ಯ ಪರದೆಯಲ್ಲಿ ಅಶ್ಲೀಲ ವೀಡಿಯೊ ಪ್ರದರ್ಶನ!

ಹೊಸದಿಲ್ಲಿ, ಎ.15: ರಾಷ್ಟ್ರ ರಾಜಧಾನಿಯ ರಾಜೀವ್ ಚೌಕದಲ್ಲಿರುವ ಅತ್ಯಂತ ಜನನಿಬಿಡ ಮೆಟ್ರೋ ಸ್ಟೇಶನ್‌ನಲ್ಲಿ ಜಾಹೀರಾತು ಪ್ರಸಾರಕ್ಕೆ ಇಡಲಾಗಿದ್ದ ದೈತ್ಯ ಪರದೆಯಲ್ಲಿ ಅಶ್ಲೀಲ ವಿಡಿಯೋವೊಂದು ಪ್ರಸಾರವಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಶ್ಲೀಲ ವಿಡಿಯೋ ಪ್ರಸಾರವಾದ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ದಿಲ್ಲಿ ಮೆಟ್ರೊ ರೈಲ್ವೇ ಕಾರ್ಪೊರೇಶನ್ ಲಿಮಿಟೆಡ್(ಡಿಎಂಆರ್‌ಸಿ) ಘಟನೆಯ ತನಿಖೆಗೆ ಸಮಿತಿ ರಚಿಸಿದೆ.
ಸಾವಿರಾರು ಜನರು ಓಡಾಡುವ ಸ್ಥಳದಲ್ಲಿ ಅಶ್ಲೀಲ ಕ್ಲಿಪ್‌ವೊಂದು ದೈತ್ಯ ಪರದೆಯಲ್ಲಿ ಪ್ರಸಾರವಾಗಿದೆ. ಕೆಲವು ಮಂದಿ ತಮ್ಮ ಸೆಲ್‌ಫೋನ್‌ಗಳಿಂದ ಈ ಅಶ್ಲೀಲ ವಿಡಿಯೋವನ್ನು ಶೂಟಿಂಗ್ ಮಾಡಿದ್ದಾರೆ.
ಅಶ್ಲೀಲ ಚಿತ್ರ ಪ್ರಸಾರವಾಗಿರುವ ದೊಡ್ಡ ಪರದೆಯು ಕೇವಲ ಜಾಹೀರಾತಿಗಾಗಿ ಮೀಸಲಿಡಲಾಗಿದೆ ಎಂದು ಡಿಎಂಆರ್‌ಸಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯು ಎ.9 ರಂದು ನಡೆದಿತ್ತು.
Next Story





