' ಹೊಸ ಜನಪ್ರಿಯತೆ' ಕಾಪಾಡಿಕೊಳ್ಳಲು ಡುಪ್ಲಿಕೇಟ್ ಮೊರೆ ಹೋದ ಶಿವಸೇನಾ ಸಂಸದ ಗಾಯಕ್ವಾಡ್ !

ಮುಂಬೈ, ಎ. 15: ಶಿವಸೇನೆ ಸಂಸದ ರವೀಂದ್ರಗಾಯಕ್‌ವಾಡ್ ಜನರಿಂದ ಪಾರಾಗಲು ಹೊಸ ಉಪಾಯ ಕಂಡು ಹುಡುಕಿದ್ದಾರೆ.ರವೀಂದ್ರ ಗಾಯಕ್‌ವಾಡ್ ತನ್ನ ತದ್ರೂಪಿಯನ್ನು ಹುಡುಕಿ ಕೊಂಡು ಜನಸಂದಣಿಯಿಂದ ಪಾರಾಗುವಲ್ಲಿ ಯಶಸ್ವಿಯೂ ಆಗಿದ್ದಾರೆ. ಏರ್ ಇಂಡಿಯ ಉದ್ಯೋಗಿಗೆ ಕಪಾಲಮೋಕ್ಷ ಮಾಡಿ ಕುಪ್ರಸಿದ್ಧಿ ಗಳಿಸಿದ ಬಳಿಕ ಗಾಯಕ್‌ವಾಡ್ ಹೋದಲ್ಲೆಲ್ಲ ಜನರು ಸೆಲ್ಫಿ,ಹಸ್ತಾಕ್ಷರಕ್ಕೆ ಮುಗಿಬೀಳುತ್ತಿದ್ದಾರೆ. ಈ ಕಿರಿಕಿರಿಯಿಂದ ಪಾರಾಗಲು ಡ್ಯುಪ್ಲಿಕೇಟ್ ವ್ಯಕ್ತಿಯಿಂದ ಅವರು ನೆರವು ಪಡೆಯುತ್ತಿದ್ದಾರೆ.
ಗಾಯಕ್ವಾಡ್‌ರ ತದ್ರೂಪಿ , ಮಹಾರಾಷ್ಟ್ರದ ಉಮರ್ಗಾ ಎಂಬಲ್ಲಿನ ನಿವಾಸಿ ರತ್ನಾಕಾಂತ್ ಸಾಗರ್‌ಆಗಿದ್ದಾರೆ. ಸಾಗರ್ ಗಾಯಕ್‌ವಾಡ್‌ರನ್ನೆ ಹೋಲುತ್ತಿದ್ದಾರೆ. ಅವರಿಬ್ಬರನ್ನು ಒಟ್ಟಿಗೆ ಇರಿಸಿದರೆ ಅಸಲಿ ಯಾರುನಕಲಿ ಯಾರು ಅಸಲಿ ಎಂದು ಕಂಡು ಹುಡುಕುವುದು ಕಷ್ಟ ಎನ್ನುವಷ್ಟು ಸಾಮ್ಯತೆ ಇಬ್ಬರಲ್ಲಿದೆ. ಗಾಯಕ್ವಾಡ್ ಹೇಳಿದ್ದರಿಂದ ರತ್ನಾಕಾಂತ್ ಕೂಡಾ ಗಾಯಕ್‌ವಾಡ್‌ರ ರೀತಿ ಬಟ್ಟೆ ಧರಿಸತೊಡಗಿದ್ದಾರೆ. ಇತ್ತೀಚೆಗೆ ಯಾವುದೋ ಕಾರ್ಯನಿಮಿತ್ತ ಸಿಎಸ್‌ಟಿ ಸ್ಟೇಶನ್‌ಗೆ ಹೋಗಿದ್ದಾಗ ಗಾಯಕ್‌ವಾಡ್ ಮತ್ತು ರತ್ನಾಕಾಂತ್ ಜೊತೆಯಲ್ಲಿದ್ದರು. ಇವರಲ್ಲಿ ಗಾಯಕ್‌ವಾಡ್ ಯಾರೆಂದು ಗುರುತಿಸಲು ಜನರು ಪರದಾಡಿದ್ದಾರೆ.





