ನೀರು,ಆಹಾರ ಮಿತವಾಗಿ ಬಳಸಿ; ಕುಮಾರಸ್ವಾಮಿ

ತುಮಕೂರು.15:ನೀರು ಮತ್ತು ಆಹಾರದ ಕೊರತೆಯಿದ್ದು,ಇವುಗಳ ಮಿತವಾಗಿ ಬಳಸಿ ಎಂದು ವಿಜ್ಞಾನ ಕೇಂದ್ರದ ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದ ಎಂ.ಜಿ.ರಸ್ತೆಯಲ್ಲಿರುವ ವಿಜ್ಞಾನಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು,ರಾಜ್ಯದಲ್ಲಿ ಬರಗಾಲ ಆವರಿಸಿದ್ದು,ಹನಿ ನೀರಿಗೂ ಜನತೆ ಪರದಾಡುತ್ತಿದ್ದಾರೆ ಎಂದು ತಿಳಿಸಿದರು
ವಿಜ್ಞಾನಕೇಂದ್ರದ ಖಚಾಂಚಿ ಶಿವಲಿಂಗಯ್ಯ ಮಾತನಾಡಿ,ನೀರನ್ನು ಅಗತ್ಯವಿರುವ ಕಡೆ ಶುದ್ಧೀಕರಿಸಿ ಬಳಕೆ ಮಾಡುವುದು ಮತ್ತು ಮಿತಬಳಕೆ ಮಾಡುವ ಮೂಲಕ ಸಂರಕ್ಷಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿ.ವಿಶ್ವನಾಥ್ ಮಾತನಾಡಿ,ನಮ್ಮ ವಿಜ್ಞಾನಕೇಂದ್ರ ಸತತ 32 ವರ್ಷಗಳಿಂದ ಬೇಸಿಗೆ ಶಿಬಿರ ಮಾಡುತ್ತಾ ಬಂದಿದೆ.ಸಾವಿರಾರು ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಇದ್ದ ಗೊಂದಲಗಳನ್ನು ನಿವಾರಿಸಿ ಆಸಕ್ತಿ ಮೂಡುವಂತೆ ಮಾಡಲಾಗಿದೆ ಎಂದರು.
ಈ ವೇಳೆ ಸಂಪನ್ಮೂಲ ವ್ಯಕ್ತಿ ಎಸ್.ರವಿಶಂಕರ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಟಿ.ಎಸ್.ನಿತ್ಯಾನಂದ,ಪಿ.ಪ್ರಸಾದ್,ಕೆ.ಎನ್.ಮಧುಸೂದನ್ ರಾವ್,ಎನ್.ಅಕ್ಕಮ್ಮ,ಪೋಷಕರು, ಮತ್ತಿತರರು ಉಪಸ್ಥಿತರಿದ್ದರು







