ಸಾಧ್ವಿ ಆರೋಗ್ಯ ವಿಚಾರಿಸಿದ ಶಾಸಕ ಬಿ.ಬಿ.ನಿಂಗಯ್ಯ

ಮೂಡಿಗೆರೆ,ಎ.15: ರಾಜಸ್ಥಾನದಿಂದ ಪಾದಯಾತ್ರೆ ಮೂಲಕ ಮೂಡಿಗೆರೆಗೆ ಆಗಮಿಸಿರುವ ಜೈನ ಸಮುದಾಯದ ಸಾಧ್ವಿ ಮಧುಸ್ಮೀತಾಜಿ ಮೂಡಿಗೆರೆ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರನ್ನು ಶಾಸಕ ಬಿ.ಬಿ.ನಿಂಗಯ್ಯ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಕಳೆದ ಕೆಲವು ದಿನಗಳ ಹಿಂದೆ ಪಾದಾಯಾತ್ರೆ ಮೂಲಕ ಮಲೆನಾಡಿಗೆ ಆಗಮಿಸಿದ್ದ ಸಾಧ್ವಿ ಮಧುಸ್ಮೀತಾಜಿ ಅವರು ಮನೆಯೊಂದರಿಂದ ಹೊರಕ್ಕೆ ಬರುವಾಗ ಕಾಲು ಜಾರಿ ಬಿದ್ದ ಪರಿಣಾಮ ಗಾಯವಾಗಿದೆ. ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದ ಶಾಸಕ ಬಿ.ಬಿ.ನಿಂಗಯ್ಯ ಆಸ್ಪತ್ರೆಗೆ ತೆರಳಿ ಆರೋಗ್ಯವನ್ನು ವಿಚಾರಿಸಿದರು.
ಈ ಸಂದರ್ಭದಲ್ಲಿ ಪ್ರಕಾಶ್ ಖಂಡ್ರೆ, ಹೇಮರಾಜ್ ಉಪಸ್ಥರಿದ್ದರು.
Next Story





