ಶಾರ್ಜಾ: ಭಾರತೀಯ ಆತ್ಮಹತ್ಯೆ

ಶಾರ್ಜಾ, ಎ. 15: 52 ವರ್ಷದ ಭಾರತೀಯರೊಬ್ಬರು ಶಾರ್ಜಾದಲ್ಲಿರುವ ತನ್ನ ಕುಟುಂಬದ ಫ್ಲಾಟ್‌ನಲ್ಲಿ ಶುಕ್ರವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಘಟನೆಯ ಬಗ್ಗೆ ತಮಗೆ ರಾತ್ರಿ 11.30ಕ್ಕೆ ಕರೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತನನ್ನು ಎಸ್.ಎಂ. ಎಂದಷ್ಟೇ ಅಧಿಕಾರಿಗಳು ಗುರುತಿಸಿದ್ದಾರೆ ಎಂದು ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.
ವ್ಯಕ್ತಿಯು ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬ ಸದಸ್ಯರಿಗೆ ವಿಷಯ ಗೊತ್ತಿರಲಿಲ್ಲ. ನಿದ್ರೆ ಮಾಡುತ್ತಿದ್ದರು ಎಂದು ಮನೆಯವರು ಭಾವಿಸಿದ್ದರು.
Next Story





