ಕಾಂಗ್ರೆಸ್ ಗೆಲುವಿಗೆ ಒಳ ಒಪ್ಪಂದ ಕಾರಣ : ರೇಣುಕಾಚಾರ್ಯ ಆರೋಪ

ದಾವಣಗೆರೆ,ಎ.15: ಗುಂಡ್ಲುಪೇಟೆ, ನಂಜನಗೂಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಜೆಡಿಎಸ್ ಜೊತೆಗಿನ ಒಳ ಒಪ್ಪಂದ ಕಾರಣ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯ ಒಂದು ಕ್ಷೇತ್ರಕ್ಕೆ 50 ಕೋ.ರೂ ನಂತೆ ಹಣ ಹಂಚಿಕೆ ಮಾಡಿದರು.ಹಣ ಹಂಚುವ ಸಲುವಾಗಿ ಆ್ಯಂಬುಲೆನ್ಸ್, ಪೊಲೀಸ್ ವಾಹನ ದುರ್ಬಳಕೆ ಮಾಡಿ, ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ. ಇದರಿಂದಲೇ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧ್ಯ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧಾವ್ ಮಾತನಾಡಿ, ಅಕ್ರಮ ಪಡಿತರ ಅಕ್ಕಿ ಸಂಗ್ರಹಿಸಿದ ಗೋದಾಮಿನ ಮೇಲೆ ಎಸಿ,ತಹಶೀಲ್ದಾರ್ ದಾಳಿ ನಡೆಸಲು ಹೋದಾಗ ಕೊಲೆಯತ್ನ ನಡೆಸಿರುವುದನ್ನು ಏಕೆ ಖಂಡಿಸುತ್ತಿಲ್ಲ ಎಂದು ಆರೋಪಿಸಿದರು..
ಸುದ್ದಿಗೋದಿಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕೂಲಂಬಿ ಬಸವರಾಜ್, ಸಿದ್ದಲಿಂಗಪ್ಪ, ಎಂ.ಪಿ. ರಮೇಶ್, ಶಿವನಗೌಡ ಟಿ. ಪಾಟೀಲ್, ಎಚ್.ಎನ್. ಶಿವಕುಮಾರ್, ಬಿ. ರಮೇಶ್ ನಾಯ್ಕ, ಶ್ರೀಕಾಂತ್ ನೀಲಗುಂದ ಮತ್ತಿತರರಿದ್ದರು.







