ಬಿಹಾರ; ಜೈಲು ವ್ಯಾನಿಗೆ ಲಾರಿ ಢಿಕ್ಕಿ: 7 ಪೊಲೀಸರು,ಓರ್ವ ನಕ್ಸಲ್ ಸಾವು

ಮುಝಫರ್‌ಪುರ.ಎ.15: ಸೀತಾಮಡಿ ಜಿಲ್ಲೆಯ ಗಾಯ್‌ಘಾಟ್ ಗ್ರಾಮದ ಬಳಿ ಶನಿವಾರ ನಸುಕಿನ ಐದು ಗಂಟೆಯ ಸುಮಾರಿಗೆ ಜೈಲುವ್ಯಾನಿಗೆ ಲಾರಿಯೊಂದು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಪೊಲೀಸರು ಮತ್ತು ಓರ್ವ ಕಟ್ಟರ್ ನಕ್ಸಲ್ ಸಾವನ್ನಪ್ಪಿದ್ದಾರೆ.
ವ್ಯಾನು ಇಬ್ಬರು ಕಟ್ಟರ್ ನಕ್ಸಲ್‌ರನ್ನು ಭಾಗಲ್ಪುರದಿಂದ ಸೀತಾಮಡಿ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದು,ಬೆಂಗಾವಲಿಗೆ 12 ಪೊಲೀಸರಿದ್ದರು. ಗಾಯಗೊಂಡಿರುವ ಇನ್ನೋರ್ವ ನಕ್ಸಲ್ ಮತ್ತು ಐವರು ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಎಸ್‌ಪಿ ಆಶಿಷ್ ಆನಂದ್ ತಿಳಿಸಿದರು. ವ್ಯಾನ್ ಚಾಲಕ ಮುನ್ನಾ ಸಿಂಗ್ ಮೃತರಲ್ಲಿ ಸೇರಿದ್ದಾನೆ.
ನಾಲ್ವರು ಪೊಲೀಸರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ನಕ್ಸಲ್ ಮತ್ತು ಮೂವರು ಪೊಲೀಸರು ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಮೃತ ಪೊಲೀಸರ ಕುಟುಂಬಗಳಿಗೆ ತಲಾ ನಾಲ್ಕು ಲ.ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ.
Next Story