ಬಿ.ಎಂ.ವೈ.ಎಫ್ ನಿಂದ ಯುವ ನಾಯಕತ್ವ ಕಾರ್ಯಾಗಾರ

ಭಟ್ಕಳ,ಎ.15: ಇಲ್ಲಿನ ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ 18 ರಿಂದ 23 ವರ್ಷ ವಯೋಮಾನದ ಯುವಕರಿಗಾಗಿ ಆಯೋಜಿಸಿದ್ದ ಯುವ ನಾಯಕತ್ವ ಕಾರ್ಯಾಗಾರವನ್ನು ರಾಷ್ಟ್ರೀಯ ಯುವ ತರಬೇತುದಾರ ಸೈಯ್ಯದ್ ಹಬೀಬ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಯುವಕರು ಮೊದಲು ತಾನು ಏನು ಎನ್ನುವುದನ್ನು ಅರಿತುಕೊಳ್ಳಬೇಕು. ತನ್ನ ಜೀವನದಲ್ಲಿ ಹೇಗೆ ಮುಂದೆಬರಬೇಕು. ಕೆವಲ ಬೇರೆಯವರು ಜೀವನದಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದುಕೊಂಡು ನೊಂದುಕೊಳ್ಳದೆ ತಾನು ಏನು ಮಾಡಬಲ್ಲೆ ಎನ್ನುವುದನ್ನು ಅರಿತುಕೊಂಡು ಯಶಸ್ವಿ ನಾಯಕರಾಗಿ ಸಮಾಜವನ್ನು ಮುನ್ನೆಡೆಸಬಹುದು ಎಂದರು.
ಕಾರ್ಯಾಗಾರದ ಉದ್ದೇಶಗಳನ್ನು ವಿವರಿಸಿ ಪ್ರಸ್ತಾವಿಕವಾಗಿ ಮತನಾಡಿದ ಫೆಡರೇಶನ್ ಶೈಕ್ಷಣಿಕ ನಿರ್ದೇಶಕ ಜಾವೀದ್ ಹುಸೇನ್ ಅರ್ಮಾರ್, ಉದ್ದೇಶ ರಾಹಿತ್ಯ ಬದುಕು ಸಾಗಿಸುತ್ತಿರುವ ಯುವ ಸಮುದಾಯ ತನ್ನ ಜೀವನದಲ್ಲಿ ಗೊತ್ತು ಗುರಿಯಿಲ್ಲದೆ ಬದುಕುತ್ತಿದೆ. ಇಂತಹ ಕಾರ್ಯಗಾರದ ಮೂಲಕ ನಾವು ಯುವ ಸಮುದಾಯ ತನ್ನ ಜೀವನಕ್ಕೊಂದು ಗುರಿಹೊಂದುವಂತೆ ಮಾಡುವುದಾಗಿದೆ. ಐಪಿಎಸ್, ಐಎಎಸ್ ಪರೀಕ್ಷೆಗಳನ್ನು ಎದುರಿಸುವಲ್ಲಿನ ಆತ್ಮವಿಶ್ವಾಸವನ್ನು ಬೆಳೆಸುವ ಉದ್ದೇಶಗಳನ್ನು ಹೊಂದುವಂತೆ ಮಾಡುವುದಾಗಿದೆ ಎಂದರು. ಕಾರ್ಯಗಾರ ಉದ್ಘಾಟನಾ ಸಮಾರಂಭದ ಆಧ್ಯಕ್ಷತೆಯನ್ನು ಭಟ್ಕಳ ಮುಸ್ಲಿಮ ಯುತ್ ಫೆಡರೇಶನ್ ಅಧ್ಯಕ್ಷ ಇಮ್ತಿಯಾರ್ ಉದ್ಯಾವರ್ ವಹಿಸಿದ್ದರು.
ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಗಾರದಲ್ಲಿ ಡಾ.ರಾಮ್ ಪುನಿಯಾನಿ, ಸೈಯ್ಯದ್ ತನ್ವೀರ್ ಆಹ್ಮದ್, ಸೈಯ್ಯದ್ ಸೈಫ್ ಸುಲ್ತಾನ್, ಶುಜಾಅ ಮುಹಮ್ಮದ್, ಡಾ.ಹನೀಫ್ ಶಬಾಬ್, ಮುಬಷ್ಶಿರ್ ಹಲ್ಲಾರೆ, ಶಾಹಿದ್ ಹಾಷ್ಮಿ, ತಲ್ಹಾ ಹುಸೇನ್, ತೌಹೀದ್ ಸಿದ್ದೀಖ್, ಮೌಲಾನ ಅಬ್ದುಲ್ ಅಲೀಂ ಖತೀಬ್, ಸಿದ್ದಿಖ್ ಸಾದಾ, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.







