ಅಹಮ್ಮದ್ ಖುರೇಷಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನ್ಯಾಯಾಲಯ ಆದೇಶ

ಮಂಗಳೂರು, ಎ.15:ಸಿ.ಸಿ.ಬಿ ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿರುವ ಆರೋಪಿ ಕಾಟಿಪಳ್ಳದ ಅಹಮ್ಮದ್ ಖುರೇಷಿ ದೇಹ ಸ್ಥಿತಿ ಸುಧಾರಿಸದೆ ಇರುವುದರಿಂದ ಆತನಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡುವಂತೆ ನ್ಯಾಯಾಲಯ ಇಂದು ಆದೇಶ ನೀಡಿದೆ .ಈ ಹಿನ್ನೆಲೆಯಲ್ಲಿ ಖುರೇಷಿಗೆ ಸೂಕ್ತ ಭದ್ರತೆಯೊಂದಿಗೆ ಚಿಕಿತ್ಸೆ ನೀಡಲು ಕರೆದೊಯ್ಯಲಾಗುವುದು ಎಂದು ಜೈಲು ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.
‘‘ಅಹಮ್ಮದ್ ಖುರೇಶಿ ನಿನ್ನೆ ರಾತ್ರಿಯಿಂದ ತೀವ್ರವಾದ ಜ್ವರದಿಂದ ಬಳಲುತ್ತಿದ್ದು, ಸ್ವತಂತ್ರವಾಗಿ ನಡೆದಾಡಲು ಆಗದೆ ಆತನ ಸ್ನಾನ ಸೇರಿದಂತೆ ನಿತ್ಯ ಚಟುವಟಿಕೆಗಳನ್ನು ಮಾಡಲಾಗದ ಸ್ಥಿತಿಯಲ್ಲಿದ್ದಾನೆ.ದೇದ ಸ್ಥಿತಿ ಗಂಭೀರವಾಗಿದೆ ,ರಕ್ತ ಸಹಿತ ವಾಂತಿ ಭೇದಿ ಯಾಗುತ್ತಿದೆ.ಈ ಬಗ್ಗೆ ಜೈಲಿನ ಅಧಿಕಾರಿಗಳಿಗೆ ತಿಳಿಸಿದರೂ ಆತನನ್ನು ಆಸ್ಪತ್ರೆಗೆ ಸೇರಿಸುತ್ತಿಲ್ಲ ಆ ಕಾರಣದಿಂದ ನಾವು ನ್ಯಾಯಾಲಯದ ಮೊರೆ ಹೋಗಿರುವುದಾಗಿ ’’ ಖುರೇಶಿ ಪರ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ಇಂದು ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಮತ್ತು ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಖುರೇಶಿಗೆ ತುರ್ತು ಚಿಕಿತ್ಸೆ ನೀಡಲು ಜೈಲು ಅಧಿಕಾರಿಗೆ ಆದೇಶ ನೀಡಿದೆ ಎಂದು ದಿನೇಶ್ ಹೆಗ್ಡೆ ಪತ್ರಿಕೆಗೆತಿಳಿಸಿದ್ದಾರೆ.
ಪಿಯುಸಿಎಲ್ ಖಂಡನೆ:-‘‘ಅಹಮ್ಮದ್ ಖುರೇಶಿಯ ಆರೋಗ್ಯ ಸ್ಥಿತಿ ಮತ್ತು ಸತ್ಯ ಶೊಧನೆಗಾಗಿ ದ.ಕ ಜಿಲ್ಲಾ ಪಿಯುಸಿಎಲ್ ಸಂಘಟನೆಯ ಅಧ್ಯಕ್ಷ ಹಾಗೂ ಇತರ ಸದಸ್ಯರು ಇಂದು ಜೈಲಿಗೆ ಭೇಟಿ ನೀಡಲು ಹೊರಟ ಸಂದರ್ಭದಲ್ಲಿ ತಮ್ಮನ್ನು ತಡೆದು ಗಂಭೀರವಾದ ಆರೋಗ್ಯ ಸಮಸ್ಯೆಯನ್ನುದುರಿಸುತ್ತಿರುವ ಪೊಲೀಸ್ ದೌರ್ಜನ್ಯ ಕ್ಕೋಲಗಾದ ಖುರೇಶಿಯನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ. ಜೈಲು ಅಧಿಕಾರಿಯ ಹಾಗೂ ಅಲ್ಲಿನ ಪೊಲೀಸರ ವರ್ತನೆಯ ಖಂಡಿಸುತ್ತೇವೆ ಮತ್ತು ಬಗ್ಗೆ ಮೇಲಾಧಿಕಾರಿಗೆ ದೂರು ನೀಡುವುದಾಗಿ ಪಿಯುಸಿಎಲ್‌ನ ಜಿಲ್ಲಾಧ್ಯಕ್ಷ ಮುಹಮ್ಮದ್ ಕಬೀರ್ ಪತ್ರಿಕೆಗೆ ತಿಳಿಸಿದ್ದಾರೆ.







