‘ಬಾಕ್ಕೂಟಲೆ ಬ್ಯಾಗ್’ ಕೊಂಕಣಿ ನಾಟಕ ಉದ್ಘಾಟನೆ

ಉಡುಪಿ, ಎ.15: ಮಣಿಪಾಲದ ಕೊಂಕಣಿ ಸಂಸಾರ್ ಪ್ರತಿಷ್ಠಾನದ ಪ್ರಸ್ತುತ ಪಡಿಸುವ ‘ಬಾಕ್ಕೂಟಲೆ ಬ್ಯಾಗ್’ ಕೊಂಕಣಿ ಹಾಸ್ಯ ಪ್ರಧಾನ ಸಾಮಾಜಿಕ ನಾಟಕ ವನ್ನು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಪೈ ಶನಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವಿೀಂದ್ರ ಮಂಟಪದಲ್ಲಿ ಉದ್ಘಾಟಿಸಿ ದರು.
ಬಳಿಕ ಮಾತನಾಡಿದ ಅವರು, ನಾಟಕ ಅಭ್ಯಾಸ ಮಾಡುವಾಗ ಸಿಗುವ ಅನುಭವ ಅದ್ಬುತ. ನಮ್ಮ ಜೀವನವೂ ಒಂದು ನಾಟಕ. ನಮ್ಮ ಜೀವನದಲ್ಲಿ ಬರುವ ಪಾತ್ರಗಳೇ ನಾಟಕಗಳಲ್ಲಿ ತೋರಿಸಲಾಗುತ್ತದೆ. ನಾಟಕದಲ್ಲಿ ಅಭಿನಯಿ ಸುವ ಕಲಾವಿದರಷ್ಟೆ ಪಾತ್ರ ಪ್ರೇಕ್ಷಕರದ್ದು ಕೂಡ ಇದೆ ಎಂದು ತಿಳಿಸಿದರು.
ನಾಟಕ ಕೃತಿಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಡಾ.ದೇವದಾಸ್ ಪೈ ಬಿಡುಗಡೆಗೊಳಿಸಿದರು. ಕೊಂಕಣಿ ಸಾಹಿತಿ ಕೋಣಿ ಶೇಷಗಿರಿ ನಾಯಕ್ ಕೃತಿ ಪರಿಚಯ ಮಾಡಿದರು. ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಎಚ್.ಶಾಂತರಾಮ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಣಿಪಾಲ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಜಿ.ಕೆ.ಪ್ರಭು, ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ನಾರಾ ಯಣ ಖಾರ್ವಿ ಮಾತನಾಡಿದರು. ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಕೆ.ಮಾಧವ ರಾಯ ಕಾಮತ್ ಉಪಸ್ಥಿತರಿದ್ದರು.
ಅಧ್ಯಕ್ಷ ಡಾ.ನಾಗೇಶ್ ಕುಮಾರ್ ಜಿ.ರಾವ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಲಜಾ ಪೈ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಡಾ.ನಾಗೇಶ್ ಕುಮಾರ್ ರಾವ್ ನಿರ್ದೇಶನದ ಬಾಕ್ಕೂಟಲೆ ಬ್ಯಾಗ್ ನಾಟಕ ಪ್ರದರ್ಶನಗೊಂಡಿತು.







