ಮೂವರು ‘ರಾ’ ಏಜಂಟರ ಬಂಧನ : ಪಾಕ್

ಇಸ್ಲಾಮಾಬಾದ್, ಎ. 15: ಭಾರತದ ಗುಪ್ತಚರ ಸಂಸ್ಥೆ ‘ರಾ’ದ ಮೂವರು ಏಜಂಟರನ್ನು ಬಂಧಿಸಿರುವುದಾಗಿ ಪಾಕ್ ಆಕ್ರಮಿತ ಕಾಶ್ಮೀರದ ಪೊಲೀಸರು ಹೇಳಿದ್ದಾರೆ.
ಬಂಧಿತರು ಸರಕಾರ ವಿರೋಧಿ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.ಅವರು ಪಾಕ್ ಆಕ್ರಮಿತ ಕಾಶ್ಮೀರದ ಅಬ್ಬಾಸ್‌ಪುರ ಗ್ರಾಮದ ತರೊಟಿ ಗ್ರಾಮದ ನಿವಾಸಿಗಳು ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಅವರನ್ನು ರಾವಲ್‌ಕೋಟ್‌ನಲ್ಲಿ ಪತ್ರಕರ್ತರ ಎದುರು ಮುಸುಕು ಹಾಕಿ ಪ್ರದರ್ಶಿಸಲಾಯಿತು.
Next Story





