ಅಡ್ಕಾ: ನವೀಕೃತ ಗೌಸಿಯ ಮಸೀದಿ ಉದ್ಘಾಟನೆ
ಮಹ್‌ಮೂದ್ ವಲಿಯುಲ್ಲಾಹ್ ಉರೂಸ್‌ಗೆ ಚಾಲನೆ

ಸುರತ್ಕಲ್, ಎ.15: ಬೈಕಂಪಾಡಿಯ ಮುಹಿಯುದ್ದೀನ್ ಜುಮಾ ಮಸೀದಿ ಮುಸ್ಲಿಮ್‌ಜಮಾಅತ್ ಅಧೀನದ ಹಝ್ರತ್ ಶೈಖ್ ಮಹ್‌ಮೂದ್ ವಲಿಯುಲ್ಲಾಹ್(ಖ.ಸಿ) ಅವರ ಹೆಸರಿನಲ್ಲಿ ನಡೆಯುವ ಱಬೈಕಂಪಾಡಿ ಅಡ್ಕಾ ಉರೂಸ್‌ೞಗೆ ಶನಿವಾರ ಸಂಜೆ ಚಾಲನೆ ನಡೆಯಿತು. ಈ ಸಂದರ್ಭ ನವೀಕೃತ ಅಡ್ಕಾ ಗೌಸಿಯಾ ಮಸೀದಿ ಮತ್ತು ದರ್ಗಾ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
ಅಖಿಲ ಭಾರತ ಸುನ್ನಿ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ನವೀಕೃತ ಮಸೀದಿಯನ್ನು ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮಸೀದಿಗಳು ಸಾಮಾಜಿಕ ಬದಲಾವಣೆಗಳ ಕೇಂದ್ರಗಳಾಗುವ ಜೊತೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಬೇಕು ಎಂದರು.
ಇಂದು ತಂತ್ರಜ್ಞಾನಗಳು ಪ್ರಗತಿ ಹೊಂದುತ್ತಿದೆ. ಆದರೆ, ಮನುಷ್ಯನ ನೈತಿಕತೆ ಕುಂದುತ್ತಿದೆ. ಇದು ಸಾಮಾಜಿಕ ಬೆಳವಣಿಗೆಯಲ್ಲಿ ದುಷ್ಪಪರಿಣಾಮ ಬೀರಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಪರಸ್ಪರ ಕಚ್ಚಾಟ ಹಾಗೂ ನಿಂದನೆಗಳು ಯಾವುದೇ ಸಮಾಜಕ್ಕೆ ಭೂಷಣವಲ್ಲ ಎಂದ ಎ.ಪಿ.ಉಸ್ತಾದ್, ಸಮಾಜದ ಪ್ರಗತಿ ಹಾಗೂ ನೆಮ್ಮದಿಗೆ ಸರ್ವ ಧರ್ಮೀಯರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ ದುಆಗೈದು ಮಾತನಾಡಿ, ಮನುಷ್ಯರಲ್ಲಿ ಧಾರ್ಮಿಕತೆಯ ಬೀಜ ಬಿತ್ತಿ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿಸುವ ಜವಾಬ್ದಾರಿಗಳು ಮಸೀದಿಗಳದ್ದಾಗಿವೆ ಎಂದರು.
ಎಂ.ಎಸ್.ಎಂ.ಅಬ್ದುರ್ರಶೀದ್ ಸಖಾಫಿ ಝೈನಿ ಕಾಮಿಲ್ ಮುಖ್ಯ ಭಾಷಣಗೈದರು.
ಕೃಷ್ಣಾಪುರ ಮುಸ್ಲಿಂ ಜಮಾಅತ್‌ನ ಖಾಝಿ ಅಲ್‌ಹಾಜ್ ಇ.ಕೆ. ಇಬ್ರಾಹೀಂ ಮುಸ್ಲಿಯಾರ್, ಬೈಕಂಪಾಡಿ ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಹೈದರ್ ಆಲಿ ಸಖಾಫಿ, ಅಬ್ದುಲ್ ಅಝೀಝ್ ಮುಸ್ಲಿಯಾರ್ ಮಾಣಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.
ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮನಪಾ ಸದಸ್ಯ ಪುರುಷೋತ್ತಮ ಚಿತ್ರಾಪುರರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಶಾಸಕ ಬಿ.ಎ.ಮೊಯ್ದಿನ್ ಬಾವಾ, ಯೆನಪೊಯ ವಿವಿ ಕುಲಪತಿ ವೈ. ಅಬ್ದುಲ್ಲಾ ಕುಂಞಿ, ಬ್ಯಾರೀಸ್ ಛೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್, ಕಾಟಿಪಳ್ಳ ಮಿಸ್ಬಾ ಮಹಿಳಾ ಕಾಲೇಜ್‌ನ ಅಧ್ಯಕ್ಷ ಹಾಜಿ ಬಿ.ಎಂ. ಮಮ್ತಾಝ್ ಅಲಿ, ಕೆಪಿಸಿಸಿ ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಕೆ.ಅಶ್ರಫ್, ಡೆಕ್ಕನ್ ಪ್ಯಾಕೇಜಿಂಗ್ ಇಂಡಿಯಾ ಪ್ರೈ.ಲಿ.ನ ಮಾಲಕ ಹಾಜಿ ಅಸ್ಗರ್ ಅಲಿ, ಮುಕ್ಕ ಸೀ ಫುಡ್‌ನ ಹಾರಿಸ್, ಮಂಗಳೂರು ವಿಶ್ವಾಸ್ ಎಸ್ಟೇಟ್‌ನ ಸುಲೈಮಾನ್ ಶೈಕ್ ಬೆಳುವಾಯಿ, ಬೈಕಂಪಾಡಿ ಎಕ್ಯುಲೇಟ್ ರೆಸಿನ್ಸ್‌ನ ಮಾಲಕ ರಝಾಕ್, ಪಾಲ್ಕಾನ್ ಇಂಡಸ್ಟ್ರೀಸ್‌ನ ಮಾಲಕ ಝುಬೈರ್, ದ.ಕ. ಜಿಲ್ಲಾ ಯುವ ಕಾಂಗ್ರಸ್‌ನ ಮುಖಂಡ ಸಲೀಂ ಯು.ಬಿ. ಉಳ್ಳಾಲ, ಶಾನ್ ಅರ್ಥ್ ಮೂವರ್ಸ್‌ನ ಶರೀಫ್, ಎ.ಬಿ.ಎಲ್. ಆರ್ಕಿಟೆಕ್ಟ್ ಆ್ಯಂಡ್ ಡಿಸೈನ್‌ನ ಮುಹಮ್ಮದ್ ನಿಸಾರ್, ಹೋಮ್ ಫ್ಲಸ್ ಫರ್ನಿಚರ್‌ನ ಆಸಿಫ್ ಸೂಫಿಯಾನ್, ಬೈಕಂಪಾಡಿ ಎಕ್ಯುಲೇಟ್ ರೆಸಿನ್ಸ್‌ನ ರಫೀಕ್, ಅಂಗರಗುಂಡಿ ಬದ್ರಿಯಾ ಮದ್ರಸ ಸಮಿತಿಯ ಅಧ್ಯಕ್ಷ ಅಡ್ವೋಕೇಟ್ ಬಿ. ಮುಖ್ತಾರ್ ಅಹ್ಮದ್, ಕೃಷ್ಣಾಪುರ ಪಾಲ್ಕನ್ ಸ್ಟೀಲ್ ಇಂಡಸ್ಟ್ರೀಸ್ ಮಾಲಕ ಹಕೀಂ, ವಾಮಂಜೂರು ಪ್ಯಾನೆಲ್ಸ್‌ನ ಅರ್ಶದ್, ಜಿಲ್ಲಾ ವಕ್ಫ್ ಅಧಿಕಾರಿ ಹಾಜಿ ಅಬೂಬಕರ್, ಇನೋವೇಟರ್ ಕಾನ್ಸೆಪ್ಟ್ ನ ಮ್ಯಾನೇಜಿಂಗ್ ಡೈರೆಕ್ಟರ್ ಅಸ್ಗರ್ ಇಂಜಿನಿಯರ್, ಶೇಡಿಗುರು ಮುಹಮ್ಮದೀಯ ಮದ್ರಸದ ಅಧ್ಯಕ್ಷ ಬಿ. ಇಬ್ರಾಹೀಂ ಅಕ್ಕರೆ, ಬೈಕಂಪಾಡಿ ಮುಹಿಯುದ್ದೀನ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಹಾಜಿ ಕೆ. ಹುಸೈನ್, ಅಝೀಝ್ ಉತ್ತಾಕ, ಇಸ್ಮಾಯೀಲ್ ಬಂಟ್ವಾಳ, ಜಿಲ್ಲಾ ವಾರ್ತಾಧಿಕಾರಿ ಬಿ.ಎಂ. ಖಾದರ್ ಶಾ ಮತ್ತಿತರರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಬೈಕಂಪಾಡಿ ಮುಹಿಯುದ್ದೀನ್ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಸೈದುದ್ದೀನ್ ಸ್ವಾಗತಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.







