ವಂಚನೆ ಆರೋಪ
ಕಾರ್ಕಳ, ಎ.15: ತೆಂಗಿನಕಾಯಿ ಪುಡಿ ತಯಾರಿಸುವ ಘಟಕಕ್ಕೆ ತೆಂಗಿನ ಕಾಯಿ ಸರಬರಾಜು ಮಾಡುವುದಾಗಿ ನಂಬಿಸಿ ಲಕ್ಷಾಂತರ ಹಣ ಪಡೆದು ವಂಚಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಟ್ಟೆಯ ಮಹಾದೇವಾ ಆರ್ಕೇಡ್‌ನಲ್ಲಿರುವ ತೆಂಗಿನಕಾಯಿ ಹುಡಿಯನ್ನು ತಯಾರಿಸುವ ಶ್ರೀಮಾತಾ ಫುಡ್ಸ್ ಆ್ಯಂಡ್ ಆಗ್ರೋ ಕಂಪೆನಿಗೆ ತೆಂಗಿನ ಕಾಯಿ ಮಾರಾಟ ಮಾಡುವುದಾಗಿ ಬೆಂಗಳೂರಿನ ವನಿತಾ ಮರಿಯಾ ಕ್ರಾಸ್ತಾ ತಿಳಿಸಿದ್ದು, ಅದರಂತೆ ವನಿತಾ, ಕಂಪೆನಿಯ ಮಾಲಕ ದೇವಾನಂದ್ ಅವರಿಂದ ಮಾ.16 ಮತ್ತು 17ರಂದು ಒಟ್ಟು 11,98,116ರೂ. ಹಣವನ್ನು ಬ್ಯಾಂಕ್ ಮೂಲಕ ಪಡೆದುಕೊಂಡಿದ್ದರು. ಬಳಿಕ ಕೇವಲ 1,15,780ರೂ. ಮೌಲ್ಯದ ತೆಂಗಿನ ಕಾಯಿಯನ್ನು ಸರಬರಾಜು ಮಾಡಿ ಉಳಿದ 10,82,336ರೂ. ಮೌಲ್ಯದ ತೆಂಗಿನ ಕಾಯಿಗಳನ್ನು ನೀಡದೆ, ಹಣವನ್ನು ವಾಪಾಸ್ಸು ಕೊಡದೆ ವಂಚಿಸಿರುವು ದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story





