ಲಾಡ್ಜ್‌ನಲ್ಲಿ ಜುಗಾರಿ: ಏಳು ಮಂದಿ ಸೆರೆ

ಉಡುಪಿ, ಎ.15: ಉಡುಪಿಯ ಪಂಚರತ್ನ ಹೊಟೇಲ್ ಲಾಡ್ಜ್‌ನ ರೂಮ್ ನಲ್ಲಿ ಎ.14ರಂದು ಸಂಜೆ ವೇಳೆ ಇಸ್ಪೀಟು ಜುಗಾರಿ ಆಡುತ್ತಿದ್ದ ಏಳು ಮಂದಿ ಯನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸತೀಶ ಶೆಟ್ಟಿ(48), ರವೀಂದ್ರ ಪೂಜಾರಿ, ಅರುಣ ಕುಮಾರ್ ಕೊಟ್ಯಾನ್(42), ಪ್ರವೀಣ ಕುಮಾರ(35), ನ್ಯಾನ್ಸನ್(32), ಪ್ರದೀಪ(30), ರಮಾನಂದ ಶೆಟ್ಟಿ(49) ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ಹೊಟೇಲ್‌ನ ಮಾಲಕ ಸಂತೋಷ ಶೆಟ್ಟಿ ತಲೆಮರೆಸಿಕೊಂಡಿದ್ದಾರೆ. ಬಂಧಿತ ರಿಂದ ಒಟ್ಟು 14,300ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





