ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ದೈನಿಕ ಕ್ಷಮೆ ಕೋರಲು ಆಗ್ರಹಿಸಿ ಅಭಿಯಾನ
ಮುಸ್ಲಿಂ ಸಂಘಟನೆಗಳ ವಿರುದ್ಧ ಆಧಾರರಹಿತ 'ಸುದ್ದಿ'

ಹೊಸದಿಲ್ಲಿ, ಎ. 15 : ದೇಶದ ಹಲವಾರು ಮುಸ್ಲಿಂ ಸಂಘಟನೆಗಳ ನ್ನು ಹೆಸರಿಸಿ ಅವುಗಳು ವಿರುದ್ಧ ದ್ವೇಷ ಹರಡುವ , ಭಯೋತ್ಪಾದನೆಗೆ ಬೆಂಬಲ ನೀಡುವ ಕೆಲಸ ಮಾಡುತ್ತಿವೆ ಎಂದು ಆಧಾರ ರಹಿತ ಸುದ್ದಿಯನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ದೈನಿಕ ಪ್ರಕಟಿಸಿದೆ ಎಂದು ಆರೋಪಿಸಿರುವ ಮಿಷನ್ ಪಾಸಿಬಲ್ ಫಾರ್ ಜಸ್ಟಿಸ್ ಎಂಡ್ ರೈಟ್ಸ್ ಎಂಬ ಸಂಘಟನೆ ಪತ್ರಿಕೆ ಈ ಕುರಿತು ತನ್ನ ಮುಖಪುಟದಲ್ಲಿ ಕ್ಷಮೆ ಕೋರಬೇಕೆಂದು change.org ನಲ್ಲಿ ಅಭಿಯಾನವೊಂದನ್ನು ಆರಂಭಿಸಿದೆ. ಈ ಅಭಿಯಾನಕ್ಕೆ ಈವರೆಗೆ 2,293 ಮಂದಿ ಬೆಂಬಲಿಸಿ ಸಹಿ ಮಾಡಿದ್ದಾರೆ.
ಏಪ್ರಿಲ್ 9, 2017 ರಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ದೈನಿಕದಲ್ಲಿ ರಾಕೇಶ್ ಕೆ ಸಿಂಗ್ ಎಂಬವರ ' ಕ್ಯಾಲಿಫೇಟ್ ರಾಡಿಕಲೈಸೇಶನ್ ರೈಸಿಂಗ್ ಇನ್ ಇಂಡಿಯಾ ' ಎಂಬ ' ವರದಿ' ಯೊಂದು ಪ್ರಕಟವಾಗಿತ್ತು. ಈ 'ವರದಿ'ಯಲ್ಲಿ ದೇಶದ ಹಲವು ಪ್ರಮುಖ ಮುಸ್ಲಿಂ ಸಂಘಟನೆಗಳ ಹೆಸರು ಪ್ರಸ್ತಾಪಿಸಿ ಈ ಸಂಘಟನೆಗಳು ಇತರ ಧರ್ಮಗಳ ವಿರುದ್ಧ ದ್ವೇಷ ಹರಡುತ್ತಿವೆ , ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿವೆ. ಇದರಿಂದಾಗಿ ಮುಸ್ಲಿಂ ಯುವಜನರು ಐಸಿಸ್ ನಂತಹ ಸಂಘಟನೆಗಳನ್ನು ಸೇರುತ್ತಿದ್ದಾರೆ ಎಂದು ಹೇಳಲಾಗಿತ್ತು.
ಈ ' ವರದಿ' ಯಲ್ಲಿ ಬೇಹು ಇಲಾಖೆಯ ಮೂಲಗಳನ್ನು ಹೆಸರಲ್ಲಿ ಹಲವಾರು ಗಂಭೀರ ಆರೋಪಗಳನ್ನು ಮಾಡಲಾಗಿದೆ. ಆದರೆ ಈ ಯಾವುದೇ ಆರೋಪಗಳಿಗೆ ಸೂಕ್ತ ಪುರಾವೆ ಒದಗಿಸಿಲ್ಲ. ಐಸಿಸ್ ಮತ್ತಿತರ ಭಯೋತ್ಪಾಕದ ಸಂಘಟನೆಗಳನ್ನು ಖಂಡಿಸುವ, ವಿರೋಧಿಸುವ ಸಂಘನೆಗಳನ್ನೇ ಭಯೋತ್ಪಾದನೆಗೆ ಉತ್ತೇಜನ ನೀಡುತ್ತವೆ ಎಂದು ಈ ' ವರದಿ' ಯಲ್ಲಿ ಹೇಳಲಾಗಿದೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಂತಹ ಪ್ರಮುಖ ದೈನಿಕ ಈ ರೀತಿಯ ಆಧಾರರಹಿತ ವರದಿ ಪ್ರಕಟಿಸುವುದು ಖಂಡನೀಯ ಎಂದು ಮಿಷನ್ ಪಾಸಿಬಲ್ ಫಾರ್ ಜಸ್ಟಿಸ್ ಎಂಡ್ ರೈಟ್ಸ್ ಹೇಳಿದೆ.
ಈ ಬಗ್ಗೆ ಪತ್ರಿಕೆಯ ಹಾಗು ವರದಿಗಾರನ ವಿರುದ್ಧ ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದೆ. ಪತ್ರಿಕೆ ತಕ್ಷಣ ತನ್ನ ಮುಖಪುಟದಲ್ಲಿ ಈ ಸ್ಪಷ್ಟೀಕರಣ ನೀಡಿ ಕ್ಷಮೆ ಯಾಚಿಸಬೇಕು ಎಂದು ಮಿಷನ್ ಪಾಸಿಬಲ್ ಫಾರ್ ಜಸ್ಟಿಸ್ ಎಂಡ್ ರೈಟ್ಸ್ ಆಗ್ರಹಿಸಿದೆ.
ಅಭಿಯಾನದ ಪೂರ್ಣ ಪಾಠ ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ :
https://www.change.org/p/the-new-indian-express-must-issue-front-page-apology-for-publishing-fake-news-about-muslim-organisations?recruiter=90510130&utm_source=share_petition&utm_medium=whatsapp







