ಸೌದಿ ಗ್ರೀನ್ ಕಾರ್ಡ್ ಪಡೆಯಲು ವೈಜ್ಞಾನಿಕ ಕೌಶಲ ಅಗತ್ಯ
ಜಿದ್ದಾ, ಎ. 15: ಸೌದಿ ಗ್ರೀನ್ ಕಾರ್ಡ್ ಪಡೆಯಲು ಬೇಕಾದ ಅರ್ಹತೆಯನ್ನು ವಾಣಿಜ್ಯ ಮತ್ತು ಹೂಡಿಕೆ ಸಚಿವಾಲಯ ಸೇರಿದಂತೆ ಹಲವಾರು ಸಂಸ್ಥೆಗಳು ನಿರ್ಧರಿಸುತ್ತವೆ ಎಂದು ಸೌದಿ ಅರೇಬಿಯದ ಶೂರಾ ಆರ್ಥಿಕ ಸಮಿತಿ ಮಂಡಳಿಯ ಉಪಾಧ್ಯಕ್ಷ ಫಾಹದ್ ಬಿನ್ ಜುಮಾ ಹೇಳಿದ್ದಾರೆ.
ಈ ಕಾರ್ಡ್‌ಗೆ ಅರ್ಹತೆ ಪಡೆಯಲು ಅಭ್ಯರ್ಥಿಗಳು ವೈಜ್ಞಾನಿಕ ಕೌಶಲ ಅಥವಾ ವೃತ್ತಿಪರತೆ ಕೌಶಲಗಳನ್ನು ಹೊಂದಿರಬೇಕಾದುದು ಅಗತ್ಯವಾಗಿದೆ. ಅಥವಾ ಅಭ್ಯರ್ಥಿಗಳು ಸೌದಿ ಅರೇಬಿಯದಲ್ಲಿ ಹೂಡಿಕೆ ಮಾಡಬಲ್ಲ ಕಂಪೆನಿ ಮಾಲೀಕರಾಗಿರಬೇಕು.
Next Story





