ಸೌದಿ: ಉದ್ಯೋಗಾಕಾಂಕ್ಷಿಗಳಲ್ಲಿ ಮುಕ್ಕಾಲು ಭಾಗ ಮಹಿಳೆಯರು

ಜಿದ್ದಾ, ಎ. 15: ಸೌದಿ ಅರೇಬಿಯದ ಉದ್ಯೋಗಾಕಾಂಕ್ಷಿಗಳ ಪೈಕಿ ಮುಕ್ಕಾಲು ಭಾಗಕ್ಕಿಂತಲೂ ಹೆಚ್ಚಿನವರು ಮಹಿಳೆಯರು ಎಂದು ವರದಿಯೊಂದು ತಿಳಿಸಿದೆ.
ಉದ್ಯೋಗಕ್ಕಾಗಿ ಹೆಸರು ನೋಂದಾಯಿಸಿರುವವರ ಪೈಕಿ 80.6 ಶೇಕಡ ಮಹಿಳೆಯರು ಎಂದು ಅಂಕಿಸಂಖ್ಯೆಗಳ ಪ್ರಾಧಿಕಾರ ತಿಳಿಸಿದೆ.
ನಿವೃತ್ತಿ ಪ್ರಾಯದವರೆಗೂ ಮಹಿಳೆಯರು ಕೆಲಸಕ್ಕಾಗಿ ಹುಡುಕಾಟದಲ್ಲಿ ತೊಡಗುತ್ತಾರೆ ಎನ್ನುವುದನ್ನು ಅಂಕಿ ಅಂಶಗಳು ತೋರಿಸಿವೆ ಎಂದು ವರದಿ ಹೇಳಿದೆ. ಹೆಸರು ನೋಂದಾಯಿಸಿರುವವರ ಪೈಕಿ 3,488 ಮಹಿಳೆಯರು 57ರಿಂದ 66 ವರ್ಷ ವಯೋಗುಂಪಿನವರು ಎಂದಿದೆ.
Next Story





