ಮನೋವೇಗಂ-2017:ಪೆಸೆಟ್ ಮತ್ತು ವಿವಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಥಮ

ತುಮಕೂರು.ಏ.15:ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ (ಎಸ್‌ಐಟಿ) ಎಸ್‌ಎಇ ಇಂಡಿಯಾ ಏರೋಸ್ಪೇಸ್ ಸಹಯೋಗದಲ್ಲಿ ನಡೆದ ಅಖಿಲ ಭಾರತ ಮಟ್ಟದ ಏರೋ ಚಾಂಪಿಯನ್‌ಷಿಪ್ ‘ಮನೋವೇಗಂ-2017’ ಸ್ಪರ್ಧೆಯಲ್ಲಿ ಐಸಿ ಇಂಜಿನ್ ವಿಭಾಗದಲ್ಲಿ ಮುಂಬೈನ ವಿವಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಮೈಕ್ರೋ ಮೋಟರ್ ವಿಮಾನ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ವಲಯದ ಪೆೆಟ್ ತಂಡ ಪ್ರಥಮ ಸ್ಥಾನಗಳಿಸಿದೆ.
ಶುಕ್ರವಾರ ಮತ್ತು ಶನಿವಾರ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ 29 ತಂಡಗಳು ಭಾಗವಹಿಸಿದ್ದವು. ಐಸಿ ಇಂಜಿನ್ ವಿಭಾಗ ಮತ್ತು ಮೈಕ್ರೋ ಮೋಟರ್ ವಿಮಾನ ವಿಭಾಗ ಎಂಬ ಎರಡು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಪ್ರಥಮ, ದ್ವಿತೀಯ ಮತ್ತು ತೃತ್ರೀಯ ಸ್ಥಾನ ನೀಡಲಾಯಿತು.ಐಸಿ ಇಂಜಿನ್ ವಿಭಾಗದಲ್ಲಿ ಮುಂಬೈನ ವಿವಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಥಮ, ಬೆಂಗಳೂರಿನ ಸೆಂಟೆಜೋಸೆಫ್ ಕಾಲೇಜು ದ್ವಿತೀಯ,ಪುಣೆಯ ವಿಶ್ವಕರ್ಮ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತೃತೀಯ ಬಹುಮಾನ ಪಡೆದರು.
ಮೈಕ್ರೋ ಮೋಟರ್ ವಿಮಾನ ವಿಭಾಗದಲ್ಲಿ ಪೆಸೆಟ್ ದಕ್ಷಿ್ಷಣ ವಲಯ ಬೆಂಗಳೂರು ಪ್ರಥಮ, ಜೈನ್ ಯೂನಿವರ್ಸಿಟಿ ಬೆಂಗಳೂರು ದ್ವಿತೀಯ,ಟೆಕ್ನೋ ಕ್ರಾಫ್ಟ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದರು. ಎರಡೂ ವಿಭಾಗಗಲ್ಲಿ ಪ್ರಥಮ ಬಹುಮಾನ ಪಡೆದವರಿಗೆ 50ಸಾವಿರ,ದ್ವಿತೀಯ ಬಹುಮಾನ ಪಡೆದವರಿಗೆ 25ಸಾವಿರ ಹಾಗೂ ತೃತೀಯ ಬಹುಮಾನ ಪಡೆದವರಿಗೆ 10ಸಾವಿರ ರೂ ನಗದು ುತ್ತು ಪಾರಿತೋಷಕ ನೀಡಲಾಯಿತು.
ಮನೋವೇಗಂ-2017 ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಆಲ್‌ಟೈಯರ್, ಎಸ್‌ಎಇ ಇಂಡಿಯಾ ಸಹಭಾಗಿತ್ವದಲ್ಲಿ ಏರೋ ಮಾಡಲೆಂಗ್ ಡಿಸೈನ್ ಬಗ್ಗೆ ಉಚಿತ ತರಬೇತಿ ನೀಡಲಾಗುತ್ತದೆ ಎಂದು ಮನೋವೇಗಂ ಸಂಚಾಲಕ ದಾೋದರನ್ ಸುಬ್ರಹ್ಮಣ್ಯಂ ತಿಳಿಸಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಎಸ್‌ಎಇ ಇಂಡಿಯಾ ಬೆಂಗಳೂರು ವಿಭಾಗದ ಮುಖ್ಯಸ್ಥ ಮುನಿರತ್ನಂ ಜೆ, ಎಸ್‌ಐಟಿ ನಿರ್ದೇಶಕ ಡಾ.ಎಂ ಎನ್ ಚನ್ನಬಸಪ್ಪ, ಪ್ರಮುಖರಾದ ಸತ್ಯಕಾಂತ್,ಬೋಯಿಂಗ್ ಕಂಪನಿ ವ್ಯಸ್ಥಾಪಕ ನಿರ್ದೇಶಕ ಡಾ. ಬಾಲಭಾರಧ್ವಜ್, ಎಎಸ್‌ಎಂ ಟೆಕ್ನಾಲಜಿಸ್‌ನ ಲಕ್ಷ್ಮೀನಾರಯಣ್ ಮತ್ತಿತರರಿದ್ದರು.







