ಎಸ್ ಐಒ ವತಿಯಿಂದ "ಚಿಣ್ಣರ ಮ್ಯಾರಥಾನ್"

ಉಳ್ಳಾಲ, ಎ.16: ಎಸ್ ಐಒ ಉಳ್ಳಾಲ ಯುನಿಟ್ ನ ವತಿಯಿಂದ ನಡೆದ 2 ದಿನಗಳ ಬೇಸಿಗೆ ಶಿಬಿರದ ಅಂಗವಾಗಿ "ಸೇವ್ ವಾಟರ್, ಸೇವ್ ಚೈಲ್ಡ್ ಹುಡ್, ಸೇವ್ ಲೈವ್ಸ್" ಎಂಬ ಘೋಷಣೆಯಡಿ ಚಿಣ್ಣರ ಮ್ಯಾರಥಾನ್ ಶನಿವಾರ ಬೆಳಗ್ಗೆ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ, ಉದ್ಯಮಿ ಅಬ್ದುರ್ರವೂಫ್ ಪುತ್ತಿಗೆ ಮ್ಯಾರಥಾನ್ ಗೆ ಚಾಲನೆ ನೀಡಿದರು.
ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಘಟಕದ ಅಧ್ಯಕ್ಷ ಎ.ಎಚ್. ಮಹ್ಮೂದ್, ಎಸ್ ಐಒ ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯೀಲ್, ಕಾರ್ಯದರ್ಶಿ ನಿಝಾಮುದ್ದೀನ್, ಎಸ್ ಐಒ ಉಳ್ಳಾಲ ಯುನಿಟ್ ಅಧ್ಯಕ್ಷ ಹಾಶಿರ್ ಆಲಿಯಾ ಮತ್ತಿತರರು ಉಪಸ್ಥಿತರಿದ್ದರು.
ತೊಕ್ಕೊಟ್ಟು ಜಂಕ್ಷನ್ ನಿಂದ ಆರಂಭವಾದ ಮ್ಯಾರಥಾನ್ ನಲ್ಲಿ ಸುಮಾರು 130ರಷ್ಟು ಮಕ್ಕಳು ಭಾಗವಹಿಸಿದ್ದರು.
Next Story





