ಭಾರ ಕಡಿಮೆಯಾಯಿತು: ಇನ್ನು ಇಮಾನಾಗೆ ನ್ಯೂರೊ ಚಿಕಿತ್ಸೆ

ಮುಂಬೈ, ಎ. 16: ಜಗತ್ತಿನ ಅತಿಹೆಚ್ಚು ಭಾರದ ಮಹಿಳೆಯೆನ್ನುವ ವಿಶೇಷಣಕ್ಕೆ ಪಾತ್ರವಾಗಿದ್ದ ಈಜಿಪ್ಟ್‌ನ ಮಹಿಳೆ ಇಮಾನಾ ಅಹ್ಮದ್‌ರ ಶರೀರದ ಭಾರ500 ಕಿಲೊಗ್ರಾಂನಿಂದ 262 ಕಿಲೊಗ್ರಾಂಗೆ ಇಳಿಕೆಯಾಗಿದೆ. ಮುಂದಿನ ಸವಾಲು ನಾಡಿ ವ್ಯೂಹಕ್ಕೆ ಚಿಕಿತ್ಸೆ ನೀಡುವುದು ಎಂದು ಅವರ ಚಿಕಿತ್ಸೆಗೆ ನೇತೃತ್ವ ವಹಿಸಿರುವ ಡಾ. ಮುಫಝಲ್ ಲಕಡ್‌ವಾಲಾ ಹೇಳಿದ್ದಾರೆ.
ಮೂರುವರ್ಷ ಹಿಂದೆ ಒಂದುಆಘಾತದಲ್ಲಿ ಇಮಾನಾರ ಶರೀರಕ್ಕೆ ಬಳಲಿಕೆ ಬಾಧಿಸಿತ್ತು. ಆದ್ದರಿಂದ ಶರೀರದ ಮಾಂಸಖಂಡಗಳ ಚಲನೆಯ ಗತಿ ಕಡಿಮೆಯಾಗಿತ್ತು. ಇಮಾನಾರ ಭಾರ ಹೆಚ್ಚಲುಇದು ಕೂಡಾ ಒಂದು ಕಾರಣವಾಗಿತ್ತು.
ಅವರಿಗೆ ಶಸ್ತ್ರಕ್ರಿಯೆ ನಡೆಸಲಾಗಿದ್ದು, ಫಿಸಿಯೊಥೆರಪಿ ನೀಡಲಾಗುತ್ತಿದೆ. ಚಿಕಿತ್ಸೆಯ ಮುಂದಿನಹಂತ ಎನ್ನುವ ನಿಟ್ಟಿನಲ್ಲಿ ನಾಡಿ ವ್ಯೂಹ ಚಿಕಿತ್ಸೆ ಅತ್ಯವಶ್ಯಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅತಿಹೆಚ್ಚುಭಾರ ಕಡಿಮೆಗೊಳಿಸುವ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ. ಶರೀರದೊಳಗೆ ಸೇರಿದ್ದ ಬಹುತೇಕ ದ್ರಾವಕವನ್ನು ಹೊರ ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅದೇ ವೇಳೆ ನಿಕಟ ಸಂಬಂಧಿಕರು ಹತ್ತಿರ ವಿಲ್ಲದಿರುವುದು ಇಮಾನಾರಿಗೆ ಮಾನಸಿಕ ಒತ್ತಡ ಉಂಟುಮಾಡಿದೆ.
ಅರಬಿಕ್ ಭಾಷೆ ಬಿಟ್ಟರೆ ಬೇರೆ ಭಾಷೆ ಅವರಿಗೆ ತಿಳಿದಿಲ್ಲ. ಇಮಾನಾರ ಚಿಕಿತ್ಸೆಗೆ ಈವರೆಗೆ 65 ಲಕ್ಷರೂಪಾಯಿ ಖರ್ಚಾಗಿದೆ. ಚಿಕಿತ್ಸೆ ಇನ್ನು ಕೂಡಾ ಮುಂದುವರಿಸಬೇಕಾಗಿದೆ. ಆದ್ದರಿಂದ ಹಣ ಕೂಡಾ ಆವಶ್ಯಕವಾಗಿದೆ. ಈಜಿಪ್ಟ್‌ನಿಂದ ಕಳೆದ ಫೆಬ್ರವರಿ ಹನ್ನೊಂದನೆ ತಾರೀಕಿಗೆ ಇಮಾನಾರನ್ನು ಚಿಕಿತ್ಸೆಗಾಗಿ ಮುಂಬೈಗೆ ಕರೆತರಲಾಗಿತ್ತು.







