ಗುಜರಾತ್‌ನಲ್ಲಿ 11ಸಿಂಹಗಳು ಹೆದ್ದಾರಿಯನ್ನು ದಾಟಿದ್ದು ಹೇಗೆ ಗೊತ್ತೇ...?
ವೀಡಿಯೊ ಇಲ್ಲಿದೆ......ನೋಡಿ.

ಹೊಸದಿಲ್ಲಿ,ಎ.16: ಗುಜರಾತ್‌ನ ಪಿಪಾವಾವ್-ರಾಜುಲಾ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಸಾಗುತ್ತಿದ್ದ ವಾಹನಗಳಲ್ಲಿದ್ದ ಜನರು ಅದ್ಭುತ ದೃಶ್ಯವೊಂದಕ್ಕೆ ಸಾಕ್ಷಿಯಾಗಿದ್ದರು. ಅವರ ಕಣ್ಣೆದುರೇ ಸುಮಾರು ಒಂದು ಡಝನ್‌ನಷ್ಟಿದ್ದ ಸಿಂಹಗಳು ತಮ್ಮ ಮರಿಗಳೊಂದಿಗೆ ಹೆದ್ದಾರಿಯನ್ನು ದಾಟಲು ಪ್ರಯತ್ನಿಸುತ್ತಿದ್ದವು.
ಮೊದಲು ಹೆದ್ದಾರಿಯ ಒಂದು ಬದಿಯನ್ನು ಸಿಂಹಗಳ ಗುಂಪು ಪ್ರವೇಶಿಸಿದಾಗ ಅವುಗಳು ರಸ್ತೆಯನ್ನು ದಾಟಲೆಂದು ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಆದರೆ ಮಂದ ಬೆಳಕಿನಲ್ಲಿ ಈ ಸಿಂಹಗಳ ಹಿಂಡು ಕಾಣುತ್ತಿರಲಿಲ್ಲವಾದ್ದರಿಂದ ರಸ್ತೆಯ ಇನ್ನೊಂದು ಬದಿಯಲ್ಲಿ ಲಾರಿ ಮತ್ತು ಬಸ್‌ಗಳ ಸಂಚಾರ ಎಗ್ಗಿಲ್ಲದೆ ಸಾಗಿತ್ತು.
ಸಿಂಹಗಳು ತಾಳ್ಮೆಯಿಂದ ಅಲ್ಲಿಯೇ ಕಾದು ನಿಂತಿದ್ದವು. ಶೀಘ್ರವೇ ಈ ಗುಂಪು ಇನ್ನೊಂದು ಬದಿಯಲ್ಲಿ ಸಾಗುತ್ತಿದ್ದ ವಾಹನಗಳ ಚಾಲಕರ ಕಣ್ಣಿಗೆ ಬಿದ್ದಿದ್ದು ತಕ್ಷಣವೇ ಸಂಚಾರ ಸ್ಥಗಿತಗೊಂಡಿತ್ತು. ಈಗ ಗುಂಪಿನ ಸ್ವಘೋಷಿತ ನಾಯಕ ಸಿಂಹವೊಂದು ಎಲ್ಲ ಸಿಂಹಗಳನ್ನು ಹೆದ್ದಾರಿಯ ವಿಭಾಜಕದ ಮೂಲಕ ರಸ್ತೆಯ ಇನ್ನೊಂದು ಬದಿಗೆ ಸುರಕ್ಷಿತವಾಗಿ ಕರೆದೊಯ್ದರೆ ಹಿಂಜರಿಯುತ್ತಿದ್ದ ಮರಿಯೊಂದು ಮಾತ್ರ ಬಂದ ದಾರಿಯಲ್ಲಿಯೇ ವಾಪಸಾಗಿದೆ.
#WATCH Traffic halts on Pipavav-Rajula highway in Gujarat as pride of lions cross the road. pic.twitter.com/qvLF1xZsbd
— ANI (@ANI_news) April 16, 2017