ಮೂಡುಬಿದಿರೆ: ದೊಡ್ಡಪ್ಪನಿಂದಲೇ ಬಾಲಕಿಯ ಅತ್ಯಾಚಾರ

ಮೂಡುಬಿದಿರೆ, ಎ.16: ಬಾಲಕಿಯ ಮೇಲೆ ದೊಡ್ಡಪ್ಪನೇ ಅತ್ಯಾಚಾರಗೈದ ಘಟನೆ ಮೂಡುಬಿದಿರೆಯ ನೆಲ್ಲಿಕಾರು ಎಂಬಲ್ಲಿ ನಡೆದಿದೆ. ನೆಲ್ಲಿಕಾರು ಚರ್ಚ್ ಬಳಿಯ ನಿವಾಸಿ ಸಮೀವುಲ್ಲಾ ಯಾನೆ ಮಾಬುಲಿ ಬಾಲಕಿಯ ಅತ್ಯಾಚಾರಗೈದ ಆರೋಪಿ ಎನ್ನಲಾಗಿದೆ.
ಬಾಲಕಿಯ ತಾಯಿ ಬೀಡಿ ಬ್ರಾಂಚ್ ಗೆ ಹಾಗೂ ತಂದೆ ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ತನ್ನ ಸಹೋದರನ ಮನೆಗೆ ಹೋದ ಆರೋಪಿ ಬಾಲಕಿಯ ಮೇಲೆ ಅತ್ಯಾಚಾರಗೈದಿದ್ದಾನೆ. ಈ ಸಂದರ್ಭ ತಾಯಿ ಮನೆಗೆ ಹಿಂದಿರುಗಿದ್ದು, ಸಮೀವುಲ್ಲಾ ಹಿಂಬಾಗಿಲಿನಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಬಾಲಕಿ ಅಳುತ್ತಿದ್ದುದರಿಂದ ಸಂಶಯಗೊಂಡ ತಾಯಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿರುದ್ಧ ಎಫ್ ಐಆರ್ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story





