ಕೇಜ್ರಿವಾಲ್ ವಿರುದ್ಧ ಅವಿಶ್ವಾಸ ಪ್ರಕಟಿಸಿದ ಆಮ್ ಆದ್ನಿ ನಾಯಕ ಕುಮಾರ ವಿಶ್ವಾಸ್

ಹೊಸದಿಲ್ಲಿ,ಎ. 16: ಅರವಿಂದ್ ಕೇಜ್ರಿವಾಲ್‌ರ ಭ್ರಷ್ಟಾಚಾರ ವಿರೋಧಿ ನಿಲುವನ್ನು ಪ್ರಶ್ನಿಸಿ ಆಮ್‌ಆದ್ಮಿ ನಾಯಕ ಕುಮಾರ್ ವಿಶ್ವಾಸ್ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದಾರೆ. ಭ್ರಷ್ಟಾಚಾರವನ್ನು ಸಂಪೂರ್ಣ ನಿವಾರಿಸುತ್ತೇನೆ ಎಂದು ಭರವಸೆ ಕೊಟ್ಟು ದಿಲ್ಲಿ ಸರಕಾರವನ್ನು ರಚಿಸಲಾಯಿತು. ಹೀಗಿದ್ದರೂ ಭ್ರಷ್ಟಾಚಾರ ಆರೋಪಿಸಲ್ಪಟ್ಟವರನ್ನುನೀವು ಸಂರಕ್ಷಿಸಿದರೆ ನೀವು ಪ್ರಶ್ನಿಸಲ್ಪಡುವಿರಿ ಎಂದು ಹಿಂದಿ ಭಾಷೆಯಲ್ಲಿ ಮಾತಾಡಿದ ವೀಡಿಯೊವನ್ನುಕುಮಾರ್ ಪೋಸ್ಟ್ ಮಾಡಿದ್ದಾರೆ.
ನಾಯಕರನ್ನು ಓಲೈಸುವ ಕ್ರಮವನ್ನು ವೀಡಿಯೊದಲ್ಲಿ ಕುಮಾರ್ ಪ್ರಶ್ನಿಸುತ್ತಾರೆ. ಮೋದಿ, ಮೋದಿ, ಅರವಿಂದ್, ಅರವಿಂದ್, ರಾಹುಲ್ ರಾಹುಲ್ ಎಂದು ಕೂಗುಗಳ ನಡುವೆ ನಾವು ಸಮಸ್ಯೆಗಳನ್ನೆಲ್ಲ ಮರೆತು ಬಿಡುತ್ತಿದ್ದೇವೆ. ರಜೌರಿ ಗಾರ್ಡನ್‌ನ ಉಪಚುನಾವಣೆಯಲ್ಲಿ ಹಠಾತ್ ಕುಸಿತ ಪಕ್ಷಕ್ಕಾಗಿದೆ. ಆದ್ದರಿಂದ ಜಾಗೃತಗೊಂಡು ಕೆಲಸ ಮಾಡುವ ಮಹತ್ವವನ್ನು ಉಪಚುನಾವಣೆ ಎತ್ತಿಹಿಡಿದಿದೆ. ರಜೌರಿಯಲ್ಲಿ ಪಕ್ಷಕ್ಕೆ ಇಡುಗಂಟು ಕೂಡಾ ನಷ್ಟವಾಯಿತು. ಆಮ್‌ಆದ್ಮಿಯ ಅಭ್ಯರ್ಥಿಗೆ ಕೇವಲ 10, 243 ವೋಟುಗಳು ಮಾತ್ರ ಬಿದ್ದಿವೆ.
ಮಾಜಿ ಕೇಂದ್ರ ಸಚಿವ ಚಿದಂಬರಂರಿಗೆ ಶೂ ಎಸೆದ ಜರ್ನೈಲ್ ಸಿಂಗ್ ಪಂಜಾಬ್‌ಗೆ ಹೋಗಿದ್ದು ವೋಟರ್‌ಗಳು ಪಾರ್ಟಿಯ ವಿರುದ್ಧ ತಿರುಗಿ ಬೀಳಲು ಕಾರಣವಾಯಿತು. ಇಂತಹ ವಿಷಯಗಳಲ್ಲಿ ಪಾರ್ಟಿ ಪ್ರಾಮಾಣಿಕವಾಗಿ ಆತ್ಮವಿಮರ್ಶೆ ನಡೆಸಬೇಕೆಂದು ಕುಮಾರ್ ವೀಡಿಯೊದಲ್ಲಿ ಸಲಹೆ ನೀಡಿದ್ದಾರೆ.