ರಾಷ್ಟ್ರೀಯ ಪ್ರತಿಭೋತ್ಸವ: ವಿವಿಧ ಸಾಧಕರಿಗೆ ಸನ್ಮಾನ

ಉಡುಪಿ, ಎ.16: ಉಡುಪಿ ನಾದವೈಭವಂ, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಬೆಂಗಳೂರು ಪತ್ರಕರ್ತರ ವೇದಿಕೆ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಪ್ರತಿಭೋತ್ಸವ ಕಾರ್ಯಕ್ರಮವನ್ನು ರವಿವಾರ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಆಯೋಜಿಸ ಲಾಗಿತ್ತು.
ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೃತಿ ಮುಂಡೋಡಿ, ಶಾಲಿಕಾ ಎಕ್ಕಾರು, ಶ್ರದ್ಧಾ ಎನ್.ಪೈವಳಿಕೆ, ಮೇಘ ಸಾಲಿಗ್ರಾಮ, ಪ್ರದೀಶ್ ಕೆ.ಬ್ರಹ್ಮಾವರ, ವೃಂದಾ ಕೊನ್ನಾರ್, ಕೃತಿ ಆರ್.ಸನಿಲ್, ಗೌತಮ್ ಭಟ್ ಪಿ., ಗಿರೀಶ್ ಭಟ್ ಪಿ., ಸೃಜನ್ ಮೂಲ್ಯ, ಪ್ರಜ್ಞಾ ಕೊಡವೂರು, ಅಮೃತಾ ಎನ್. ಎಸ್., ಪೂಜಾಶ್ರೀ, ಹರ್ಷಿತಾ ಟಿ.ವಿ., ಕೆ.ಜಿ.ದೀಪ್ತಿ, ಕೆ.ಅರವಿಂದ್, ಶೃದ್ಧಾ ಉಪಾಧ್ಯಾಯ, ಲಕ್ಷ್ಮೀ ಉಪಾಧ್ಯಾಯ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಅಂಬಲಪಾಡಿ ಶ್ರೀಜನಾರ್ದನ ಮಹಾಕಾಳಿ ದೇವ ಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಮಾತನಾಡಿ, ಸಾಧನೆಗೆ ಸಿಗುವ ಪ್ರಶಸ್ತಿಯನ್ನು ಮುಂದಿನ ಸಾಧನೆಯ ಮೆಟ್ಟಿಲಾಗಿ ಸ್ವೀಕರಿಸಬೇಕು. ಪ್ರತಿಯೊಬ್ಬರಲ್ಲೂ ಪ್ರತಿಭೆಯೆಂಬುದು ಇದೆ. ಅದನ್ನು ಗುರುತಿಸಿ ಪ್ರೋತ್ಸಾಹಿ ಸುವ ಕೆಲಸವನ್ನು ಹೆತ್ತವರು ಮಾಡಬೇಕು. ಸಾಧನೆ ಮಾಡಬೇಕೆಂಬ ಆಸೆ ಇದ್ದರೆ ಸಾಲದು. ಅದರೊಂದಿಗೆ ಪರಿಶ್ರಮ ಕೂಡ ಪಡಬೇಕು ಎಂದರು
ಕನ್ನಡ ಸಾಹಿತ್ಯ ಪರಿಷತ್‌ನ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ನಾದವೈಭವಂನ ಉಡುಪಿ ವಾಸುದೇವ ಭಟ್, ಸಾಹಿತಿ ವಿ.ಬಿ. ಕುಳವರ್ಮ, ಪತ್ರಕರ್ತರ ವೇದಿಕೆಯ ಶೇಖರ ಅಜೆಕಾರು, ವಿಜೇತ ಶೆಟ್ಟಿ ಉಪಸ್ಥಿತರಿದ್ದರು.
ಮಂಜಪ್ಪ ಡಿ.ಗೋಣಿ ಕಾರ್ಯಕ್ರಮ ನಿರೂಪಿಸಿದರು







