ಇಬ್ಬರು ಶಂಕಿತ ಐಎಸ್ಐ ಏಜೆಂಟರ ಸೆರೆ
ಬಿಲಾಸ್‌ಪುರ, ಎ.16: ರಾಷ್ಟ್ರವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದಲ್ಲಿ ಛತ್ತೀಸ್‌ಗಢದ ಪೊಲೀಸರು ಇಬ್ಬರು ಶಂಕಿತ ಐಎಸ್ಐ ಏಜೆಂಟರನ್ನು ಬಂಧಿಸಿದ್ದಾರೆ.
ಮಣಿಂದರ್ ಯಾದವ್ ಮತ್ತು ಸಂಜಯ್ ದೇವಾಂಗನ್ ಸೆರೆಸಿಕ್ಕವರು. ಇವರ ದೂರವಾಣಿ ಸಂಭಾಷಣೆ ಆಲಿಸಿದ ಬಳಿಕ ಪೊಲೀಸರು ಇವರನ್ನು ಬಂಧಿಸಿದ್ದಾರೆ.
ಇವರು , ಇತ್ತೀಚೆಗೆ ರಾಷ್ಟ್ರದ್ರೋಹ ಕೃತ್ಯದಲ್ಲಿ ತೊಡಗಿದ್ದ ಆರೋಪದಲ್ಲಿ ಮಧ್ಯಪ್ರದೇಶ ಮತ್ತು ಜಮ್ಮುವಿನಲ್ಲಿ ಬಂಧಿಸಲ್ಪಟ್ಟಿದ್ದ ಸತ್ವಿಂದರ್ ಸಿಂಗ್ , ರಜ್ಜಾನ್ ತಿವಾರಿ ಮತ್ತು ಬಲರಾಮ್‌ರ ಸಂಬಂಧಿಕರು ಎಂದು ಬಿಲಾಸ್‌ಪುರ ಎಸ್‌ಪಿ ಮಾಯಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ. ಇವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.
Next Story





